ಈ ದಿನಕ್ಕೂ ಮುನ್ನ ಎಲ್‌ಐಸಿ ಪಾಲಿಸಿಯೊಂದಿಗೆ ಪ್ಯಾನ್ ಲಿಂಕ್ ಮಾಡಿ

ಈ ದಿನಕ್ಕೂ ಮುನ್ನ ಎಲ್‌ಐಸಿ ಪಾಲಿಸಿಯೊಂದಿಗೆ ಪ್ಯಾನ್ ಲಿಂಕ್ ಮಾಡಿ

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಪಾಲಿಸಿಗಳಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕವನ್ನು ಘೋಷಣೆ ಮಾಡಿದೆ. ಎಲ್‌ಐಸಿಯ ಇತ್ತೀಚಿನ ನೋಟಿಫಿಕೇಷನ್ ಪ್ರಕಾರ, ಮಾರ್ಚ್ 31, 2023ಕ್ಕೂ ಮುನ್ನ ಎಲ್‌ಐಸಿ ಪಾಲಿಸಿಯೊಂದಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಬೇಕಾಗುತ್ತದೆ.

ಎಲ್‌ಐಸಿ ಪಾಲಿಸಿ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡದವರಿಗೆ ನೀಡುವ ಸಮಯವಕಾಶವನ್ನು ಅಥವಾ ಗಡುವನ್ನು ಇತ್ತೀಚೆಗೆ ಎಲ್‌ಐಸಿ ವಿಸ್ತರಣೆ ಮಾಡಿದೆ. ಗ್ರಾಹಕರು ಸುಲಭವಾಗಿ ಈ ಕೆಳಗಿನ ವಿಧಾನವನ್ನು ಪಾಲಿಸುವ ಮೂಲಕ ತಮ್ಮ ಎಲ್‌ಐಸಿ ಪಾಲಿಸಿಯೊಂದಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳಬಹುದು.

ಎಲ್‌ಐಸಿ ಇಂಡಿಯಾ ವೆಬ್‌ಸೈಟ್ಗೆ ನೇರವಾಗಿ ಸೈನ್‌ಇನ್ ಆಗುವ ಮೂಲಕ ನೀವು ಪ್ಯಾನ್ ಕಾರ್ಡ್ ಹಾಗೂ ಎಲ್‌ಐಸಿ ಪಾಲಿಸಯನ್ನು ಲಿಂಕ್ ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಹಂತ ಹಂತವಾದ ಮಾಹಿತಿ ಈ ಕೆಳಗಿದೆ ಮುಂದೆ ಓದಿ...

 ಎಂಬುವುದು ಎಲ್‌ಐಸಿ ಇಂಡಿಯಾದ ನೇರ ಲಾಗಿನ್ ಯುಆರ್‌ಎಲ್ ಆಗಿದೆ.

ಹಂತ 1: ನಿರ್ದಿಷ್ಟ ಸ್ಥಳದಲ್ಲಿ ಪಾಲಿಸಿ ಸಂಖ್ಯೆ ನಮೂದಿಸಿ

ಹಂತ 2: ಜನನ ದಿನಾಂಕದೊಂದಿಗೆ ಪ್ಯಾನ್ ಮಾಹಿತಿ, ಕ್ಯಾಪ್ಚಾ ಕೋಡ್ ನಮೂದಿಸಿ

ಹಂತ 3:  ಅನ್ನು ಕ್ಲಿಕ್ ಮಾಡಿ

ಇಷ್ಟನ್ನು ಪಾಲಿಸಿದರೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಸ್ಕ್ರೀನ್‌ನಲ್ಲಿ ಎಲ್‌ಐಸಿ ಪ್ಯಾನ್ ಸ್ಟೇಟಸ್ ಲಭ್ಯವಾಗಲಿದೆ. ನಿಮ್ಮ ಎಲ್‌ಐಸಿ ಪಾಲಿಸಿಯೊಂದಿಗೆ ಪ್ಯಾನ್ ಲಿಂಕ್ ಆಗದಿದ್ದರೆ ನೀವು  ಎಂಬ ಆಯ್ಕೆಯನ್ನು ನೀವು ಕ್ಲಿಕ್ ಮಾಡಬೇಕಾಗುತ್ತದೆ. ಇದಾದ ಬಳಿಕ ಹೊಸ ವೆಬ್‌ ಪುಟ ತೆರೆಯಲಿದೆ. ಇಲ್ಲಿ ನೀವು ಅಗತ್ಯ ಮಾಹಿತಿಯನ್ನು ಹಾಕಬೇಕಾಗುತ್ತದೆ.

ಪ್ಯಾನ್ ಕಾರ್ಡ್‌ಗೆ ಎಲ್‌ಐಸಿ ಪಾಲಿಸಿ ಲಿಂಕ್ ಮಾಡುವುದು ಹೇಗೆ?ಅದಕ್ಕಾಗಿ ನೀವು ಮೊದಲು ಎಲ್‌ಐಸಿ ವೆಬ್‌ಸೈಟ್‌ ಗೆ ಲಾಗಿನ್ ಆಗಬೇಕಾಗುತ್ತದೆ. ಆ ಬಳಿಕ ಈ ಕೆಳಗಿನ ಹಂತವನ್ನು ಪಾಲಿಸಬೇಕಾಗುತ್ತದೆ.

ಹಂತ 1: ಎಲ್‌ಐಸಿ ಡೈರೆಕ್ಟ್ ಲಿಂಕ್  ಗೆ ಲಾಗಿನ್ ಆಗಿ

ಹಂತ 2: ಪ್ಯಾನ್‌ನಲ್ಲಿರುವ ಮಾಹಿತಿಯಂತೆ ನಿಮ್ಮ ಜನನ ದಿನ, ಲಿಂಗವನ್ನು ಉಲ್ಲೇಖಿಸಿ

ಹಂತ 3: ಪ್ಯಾನ್ ಕಾರ್ಡ್ ಮಾಹಿತಿಯೊಂದಿಗೆ ನಿಮ್ಮ ಇಮೇಲ್ ವಿಳಾಸ ನಮೂದಿಸಿ

ಹಂತ 4: ನಿಮ್ಮ ಹೆಸರು, ಫೋನ್ ಸಂಖ್ಯೆ, ಪಾಲಿಸಿ ಸಂಖ್ಯೆಯನ್ನು ನಮೂದಿಸಿ.

ಹಂತ 5: ಕ್ಯಾಪ್ಚಾ ಟೈಪ್ ಮಾಡಿ , Get OTP ಕ್ಲಿಕ್ ಮಾಡಿ

ಹಂತ 6: ಲಭ್ಯವಾದ ಒಟಿಪಿಯನ್ನು ನಮೂದಿಸಿದರೆ ಹಂತ ಪೂರ್ಣವಾಗಲಿದೆ.