ಕರ್ನಾಟಕದ ಬಗ್ಗೆ ಮೋದಿಯವರಿಗೆ ಹೆಚ್ಚು ಪ್ರೀತಿ ಅಭಿಮಾನ; ಅಮಿತ್ ಶಾ, ಪ್ರಧಾನಿ ಮಂತ್ರಿ ಕಂಡ್ರೆ ಡಿಕೆಶಿಗೆ ಭಯ; ಆರ್ .ಅಶೋಕ್
ಚಿಕ್ಕಬಳ್ಳಾಪುರ: ಕರ್ನಾಟಕ ಸರ್ಕಾರದ ಬಗ್ಗೆ ಮೋದಿಗೆ ಗೌರವ ಇಲ್ಲ ಎಂಬ ಡಿಕೆಶಿ ಹೇಳಿಕೆಗೆ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿ ಮತ್ತು ಅಮಿತ್ ಶಾ ಕಂಡರೆ ಡಿ.ಕೆ ಶಿವಕುಮಾರ್ ಗೆ ಭಯ ಎಂದು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮೋದಿಯವರಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕವೇ ಬಹಳ ಮುಖ್ಯವಾಗಿದೆ.
ಅತಿವೃಷ್ಠಿ ಆದಾಗ ಅತಿ ಹೆಚ್ಚು ಪರಿಹಾರದ ಹಣ ಕೇಂದ್ರ ಸರ್ಕಾರ ನೀಡಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ 1 ವರ್ಷ ಕಾಯಿಸ್ತಿದ್ದರು. ಈಗ 1 ತಿಂಗಳಲ್ಲಿ ಪರಿಹಾರ ಕೊಡುತ್ತಿದ್ದಾರೆ.