ಭಾರತಕ್ಕೆ ಬಿಎಂಡಬ್ಲ್ಯು 7 ಸೀರಿಸ್ ಆಗಮನ

ಭಾರತಕ್ಕೆ ಬಿಎಂಡಬ್ಲ್ಯು 7 ಸೀರಿಸ್‌ನ 2023ರ ಆವೃತ್ತಿ ಆಗಮಿಸಿದೆ. ಇದು 3.0 ಲೀಟರ್‌ನ ಆರು ಸಿಲಿಂಡರ್‌ನ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 740ಐ ಎಂ ಸ್ಪೋರ್ಟ್ ಆವೃತ್ತಿಯಲ್ಲಿ 376 ಬಿಎಚ್‌ಪಿ ಮತ್ತು 520 ಎನ್‌ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ ಎಂಟು ಸ್ಪೀಡ್‌ನ ಆಟೋಮ್ಯಾಟಿಕ್ ಗಿಯರ್‌ಬಾಕ್ಸ್ ಇದೆ. 2023ರ ಮಾಡೆಲ್‌ನಲ್ಲಿ ದೊಡ್ಡದಾದ ಹೊಸ ವಿನ್ಯಾಸದ ಕಿಡ್ನಿ ಗ್ರಿಲ್ ಮತ್ತು ಆಕರ್ಷಕ ಹೆಡ್‌ಲ್ಯಾಂಪ್ ಇದೆ. ಇದರ ಗ್ರಿಲ್ ಎರಡು ಕಣ್ಣುಗಳಂತೆ ಕಾಣಿಸುತ್ತದೆ.