ಸಂಸತ್‌ನಲ್ಲಿ ಕನ್ನಡದಲ್ಲಿ ಭಾಷಣ ಮಾಡಿ ಗಮನಸೆಳೆದ ಕೋಲಾರದ ವಿದ್ಯಾರ್ಥಿನಿ

ಕೋಲಾರದ ಕುಮಾರಿ ಸ್ಪೂರ್ತಿ ಸಂಸತ್ತಿನಲ್ಲಿ ಅಚ್ಚ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಸ್ಫೂರ್ತಿ ಪ್ರಸ್ತುತ ಬೆಂಗಳೂರಿನ ಬಿಎಂಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ನ.19ರಂದು ಜಂಟಿಯಾಗಿ ಆಯೋಜಿ ಸಿದ್ದ 'ರಾಷ್ಟ್ರನಾಯಕರಿಗೆ ಸಂಸತ್‌ನಲ್ಲಿ ಗೌರವ ಸಮರ್ಪಣೆ’ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯವನ್ನು ಕೋಲಾರದ ಚಿನ್ನದ ಪದಕ ವಿಜೇತ ಹುಡುಗಿ ಕು.ಸ್ಪೂರ್ತಿ ಪ್ರತಿನಿಧಿಸಿ ಭಾಷಣ ಮಾಡಿದ್ದಾರೆ.