ಆರೋಗ್ಯದಲ್ಲಿ ಏರುಪೇರು : ತುರ್ತು ನಿಗಾ ಘಟಕದಲ್ಲಿ ಬಾಲಿವುಡ್ ನಟಿ ಸಾಯಿರಾ ಬಾನು

ಆರೋಗ್ಯದಲ್ಲಿ ಏರುಪೇರು : ತುರ್ತು ನಿಗಾ ಘಟಕದಲ್ಲಿ ಬಾಲಿವುಡ್ ನಟಿ ಸಾಯಿರಾ ಬಾನು

ಆರೋಗ್ಯದಲ್ಲಿ ಏರುಪೇರು : ತುರ್ತು ನಿಗಾ ಘಟಕದಲ್ಲಿ ಬಾಲಿವುಡ್ ನಟಿ ಸಾಯಿರಾ ಬಾನು

ಮುಂಬೈ : ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನ ಹಿರಿಯ ನಟಿ, ದಿಲೀಪ್ ಕುಮಾರ್ ಅವರ ಪತ್ನಿ ಸಾಯಿರಾ ಬಾನು ಅವರನ್ನು ತೀವ್ರ ರಕ್ತದೊತ್ತಡ ಸಮಸ್ಯೆಯಿಂದಾಗಿ ಬುಧವಾರ ತುರ್ತು ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ.

ಸಾಯಿರಾ ಬಾನು ಅವರು ಕಳೆದ ಮೂರು ದಿನಗಳ ಹಿಂದೆ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ತೀವ್ರ ರಕ್ತದೊತ್ತಡ ಕಾಣಿಸಿಕೊಂಡ ಪರಿಣಾಮ ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸಾಯಿರಾ ಬಾನು ಅವರ ಪತಿ ಹಿರಿಯ ನಟ ದಿಲೀಪ್ ಕುಮಾರ್ ಅವರು ಉಸಿರಾಟದ ಸಮಸ್ಯೆಯಿಂದ ಇತ್ತೀಚಿಗೆ ನಿಧನಹೊಂದಿದ್ದರು.

ಸಾಯಿರಾ ಬಾನು ಮತ್ತು ದಿಲೀಪ್ ಕುಮಾರ್ ಸಗಿನಾ, ಗೋಪಿ, ಬೈರಾಗ್ ಮತ್ತು ದುನಿಯಾ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಸಾಯಿರಾ ತಮ್ಮ ಹದಿನಾರನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು.