ಮೋಸ್ಟ್ ವಾಂಟೆಡ್ ಭಯೋತ್ಪಾದಕನನ್ನು ಬಂಧಿಸಿದ NIA !

ನವದೆಹಲಿ: ಹಲವು ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಕುಲ್ವಿಂದರ್ಜಿತ್ ಸಿಂಗ್ ಅಲಿಯಾಸ್ ಖಾನ್‌ಪುರಿನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. 2019ರಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಈ ಕುಖ್ಯಾತ ಖಲಿಸ್ತಾನಿ ಭಯೋತ್ಪಾದಕ ಬ್ಯಾಂಕಾಕ್‌ನಿಂದ ದೆಹಲಿಗೆ ಬಂದಾಗ ಎನ್‌ಐಎ ಅಧಿಕಾರಿಗಳ ಬಲೆ ಬಿದ್ದಿದ್ದಾನೆ. ಈತ ಭಯೋತ್ಪಾದಕ ಗುಂಪುಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.