ಅಜಯ್‌ ದೇವಗನ್‌ ದೃಶ್ಯಂ 2 ಪೈರಸಿ; ಹೆಚ್‌ಡಿ ವಿಡಿಯೋ ಲೀಕ್‌..!

ಅಜಯ್‌ ದೇವಗನ್‌ ದೃಶ್ಯಂ 2 ಪೈರಸಿ; ಹೆಚ್‌ಡಿ ವಿಡಿಯೋ ಲೀಕ್‌..!

ಇತ್ತೀಚಿಗೆ ಬಿಡುಗಡೆಯಾಗುವ ಎಲ್ಲಾ ಸಿನಿಮಾಗಳು ಪೈರಸಿ ಭೂತಕ್ಕೆ ಬಲಿಯಾಗುತ್ತಿವೆ. ಅಜಯ್ ದೇವಗನ್ ಅವರ ದೃಶ್ಯಂ 2 ಇದಕ್ಕೆ ಹೊರತಾಗಿಲ್ಲ. ಇಂದು ಬಿಡುಗಡೆಯಾದ ಸಿನಿಮಾಗೆ ಪ್ರೇಕ್ಷಕರು & ವಿಮರ್ಶಕರಿಂದ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ದೃಶ್ಯಂ 2 ಹೈ ಕ್ವಾಲಿಟಿಯ ಪೈರಸಿ ವಿಡಿಯೋ ಆನ್‌ಲೈನ್‌ನಲ್ಲಿ ಕುಖ್ಯಾತ ಸೈಟ್‌ಗಳಿಂದ ಲೀಕ್‌ ಮಾಡಲಾಗಿದೆ ಎಂದು ವರದಿಯಾಗಿದೆ. ಇದರಿಂದ ಚಿತ್ರಕ್ಕೆ ಹೊಡೆತ ಬೀಳುವ ಸಾಧ್ಯತೆಯಿದೆ.