ಅಮೆರಿಕಾ ಅಮೆರಿಕಾ ಸಿನಿಮಾ ಖ್ಯಾತಿಯ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಮುಂದಿನ ಸಿನಿಮಾ ಶೂಟಿಂಗ್ ಫೆಬ್ರವರಿಯಲ್ಲಿ ಆರಂಭಿಸಲಿದ್ದಾರೆ. ಸ್ಯಾಂಡಲ್ ವುಡ್ ಮೆಸ್ಟ್ರು ಎಂದೇ ಖ್ಯಾತಿ ಪಡೆದಿರುವ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಮುಂದಿನ ಸಿನಿಮಾಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.
ಅಮೆರಿಕಾ ಅಮೆರಿಕಾ ಸಿನಿಮಾ ಖ್ಯಾತಿಯ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಮುಂದಿನ ಸಿನಿಮಾ ಶೂಟಿಂಗ್ ಫೆಬ್ರವರಿಯಲ್ಲಿ ಆರಂಭಿಸಲಿದ್ದಾರೆ. ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾದಲ್ಲಿ ನಿರೂಪ್ ಭಂಡಾರಿ ನಾಯಕನ ರೋಲ್ ಮಾಡುತ್ತಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸಿದ್ದ ರಂಗಿತರಂಗ ನಟ ನಿರೂಪ್, ಈ ಹಿಂದೆ ಮಾಡದ ರೀತಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ನಿರ್ದೇಶಕರು ಮುಂದಿನ ದಿನಗಳಲ್ಲಿ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ. ಶೀಘ್ರವೇ ತಂತ್ರಜ್ಞರನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ. ಅಮೆರಿಕಾ ಅಮೆರಿಕಾ ಸಿನಿಮಾ ಸಂಗೀತ ನಿರ್ದೇಶಕ ಮನೋಮೂರ್ತಿ ಈ ಸಿನಿಮಾಗಾಗಿ ಮತ್ತೆ ಒಂದಾಗಿದ್ದಾರೆ ಎಸ್ ಕೆ ರಾವ್ ಛಾಯಾಗ್ರಹಣವಿದೆ.