ನೈಟ್ ಕರ್ಫ್ಯೂ ಆತಂಕದಲ್ಲಿ ಹೋಟೆಲ್ ಉಧ್ಯಮ

ಆ್ಯಂಕರ್- ಕೊರೋನ್ ಮಹಾಮಾರಿ  ದಿನೆ ದಿನೆ ಕಡಿಮೆಯಾಗುತ್ತಿದೆ. 
 ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕ್ರಮೇಣ ತಗ್ಗಿದೆ. ನೆಲಕಚ್ಚಿದ್ದ ಹೋಟೆಲ್ ಉಧ್ಯಮ ಕೊಂಚ ಚೇತರಿಸಿಕೊಂಡಿದೆ.
ಆದರೆ ರಾಜ್ಯ ಸರ್ಕಾರದ ನೈಟ್ ಕರ್ಪೂ ಮಾತ್ರ ಹೋಟೆಲ್ ಉದ್ಯಮಕ್ಕೆ ಹಿಡಿಶಾಪವಾಗಿದೆ. ಈ ಕುರಿತು ಒಂದು ವರದಿ.
ಶೈಕ್ಷಣಿಕ ಜಿಲ್ಲೆ ಧಾರವಾಡದಲ್ಲಿ ಕೊವಿಡನಿಂದಾಗಿ ಶಿಕ್ಷಣ, ವ್ಯಾಪಾರ, ಸಾಂಸ್ಕೃತಿಕ ಸೇರಿದಂತೆ ಎಲ್ಲ ಕ್ಷೇತ್ರಗಳು ಸ್ತಬ್ದಗೊಂಡಿದ್ದವು. ಆದರೆ ಈಗ ಕೋವಿಡ್ ಅಬ್ಬರ ಕಡಿಮೆಯಾಗಿದ್ದರಿಂದ ರಾಜ್ಯ ಸರ್ಕಾರ ಕೆಲವು ನಿಯಮಗಳನ್ನು ಸಡಿಲಗೊಳಿಸಿದೆ. ಇದರಿಂದ ಉದ್ಯಮಗಳು ತುಸು ಚೇತರಿಕೆ ಕಂಡಿವೆ. ಆದರೆ ಹೋಟೆಲಗಳಿಗೆ ನೈಟ್ ಕರ್ಪೂ ಎಂಬ ನಿಯಮ ತಂದಿದ್ದರಿಂದ ಉದ್ಯಮಿಗಳು ವ್ಯಾಪಾರ ಇಲ್ಲದೆ ಕಂಗಾಲ್ ಆಗಿದ್ದಾರೆ. ಅಷ್ಟೇ ಅಲ್ಲ ತುತ್ತು ಅನ್ನಕ್ಕಾಗಿ ಪರ ಊರಿನಿಂದ ದುಡಿಯಲು ಬಂದ ಶ್ರಮ ಜೀವಿಗಳಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಆವರಿಸಿದೆ. ಇದು ಒಂದೆಡೆಯಾದರೆ ಹೋಟೆಲ್ ಊಟದ ಮೇಲೆ ಅವಲಂಬಿತರಾಗಿ ಶಿಕ್ಷಣಕ್ಕಾಗಿ ಅರಸಿ ಬಂದ ವಿದ್ಯಾರ್ಥಿಗಳ ಪಾಡು ಕೂಡ ಹೇಳತೀರದು. 
ಕೋವಿಡ್ ಪಾಸಿಟಿವಿಟಿ ದರ ಶೆ 10% ಕ್ಕಿಂತ ಕಡಿಮೆಯಿದ್ದು ಇಂತಾ ಸಮಯದಲ್ಲಿ ರಾಜ್ಯ ಸರ್ಕಾರ ಇನ್ನೂ ನೈಟ್ ಕರ್ಫ್ಯೂ ಮುಂದುವರಿಸಿದೆ.  ರಾತ್ರಿ 9 ಘಂಟೆ ನಂತರ ಹೋಟೆಲ್, ಬಾರ ರೆಸ್ಟೋರೆಂಟ್‌ಗಳನ್ನು ಬಂದ್ ಮಾಡುವ ನಿಯಮವನ್ನು ಮುಂದುವರೆಸಿಕೊಂಡೇ ಹೋದ್ರೆ ಹೊಟೇಲ್ ಉದ್ಯಮಿಗಳು ಬದುಕುವುದು ಹೇಗೆ ಅಂತ ತಮ್ಮ ಅಳಲು ತೋಡಿಕೊಂಡರು.

ಈಗ ಸದ್ಯ ಧಾರವಾಡ ಜಿಲ್ಲೆಯ ಪರಿಸ್ಥಿತಿ ನೋಡಿದ್ರೆ ನೈಟ್ ಕರ್ಫ್ಯೂ ಅವಶ್ಯಕತೆ ಇಲ್ಲ, ಯಾಕೆಂದರೆ ಜನ ಕೂಡ ಜಾಗ್ರತರಾಗಿದ್ದು ಶೇ 90% ರಷ್ಟು ಜನ ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿ ಕೊಂಡಿದ್ದಾರೆ. ಆದರೆ ಈ ನೈಟ್ ಕರ್ಪೂ ದಿಂದ ಹೋಟೆಲ್ ಉಧ್ಯಮದ ಮೇಲೆ ಅವಲಂಬಿತ ಅದೆಷ್ಟೋ ಕುಟುಂಬಗಳು ಬೀದಿಗೆ ಬರುವುದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದ ರಾಜ್ಯ ಸರ್ಕಾರ ನೈಟ್ ಕರ್ಪೂರದ್ದು ಪಡಿಸಿ ಅಮಾಯಕ ಶ್ರಮಜೀವಿಗಳಿಗೆ ಆಸರೆ
ನೀಡಬೇಕಾಗಿದೆ