ಹೆಣ್ಣು ಮಕ್ಕಳ ನೋವು ತಿಳಿಯದವರು ಮತಾಂತರ ನಿಷೇಧ ಕಾಯ್ದೆ ವಿರೋಧಿಸುತ್ತಿದ್ದಾರೆ - ಈಶ್ವರಪ್ಪ ಹೇಳಿಕೆ

ಬೆಳಗಾವಿ : ಬಿಜೆಪಿ ಸರ್ಕಾರವು ಕಾನೂನುಬದ್ಧವಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಹೊರಟಿದೆ. ಆದರೆ, ಕಾಂಗ್ರೆಸ್ ನಾಯಕರಿಗೆ ಹೆಣ್ಣು ಮಕ್ಕಳ ನೋವು ಗೊತ್ತಿಲ್ಲದಿರುವುದರಿಂದಾಗಿ ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಸಚಿವ ಕೆ.ಎಸ್.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರಗೊಳಿಸಿ ಮಹಿಳೆಯರನ್ನು ಉಪಯೋಗಿಸಿಕೊಂಡು ನಡು ಬೀದಿಯಲ್ಲಿ ಕೈ ಬಿಟ್ಟಿರುವ ಸಾಕಷ್ಟು ಉದಾಹರಣೆಗಳು ಸಮಾಜದಲ್ಲಿ ಬೆಳಕಿಗೆ ಬಂದಿವೆ. ಆಸೆ, ಆಕಾಂಕ್ಷೆಗಳಿಗೆ ಬಲಿಯಾಗಿಸಿ ಮತಾಂತರ ಮಾಡಿ ಹೆಣ್ಣು ಮಕ್ಕಳನ್ನು ವಿದೇಶಕ್ಕೆ ಮಾರಾಟ ಮಾಡಲಾಗುತ್ತಿದ್ದು, ಇಂತಹ ಸಾಕಷ್ಟು ಅಮಾನವೀಯ ಹಾಗೂ ಹೃದಯ ವಿದ್ರಾವಕ ಘಟನೆಗಳು ಸಮಾಜದಲ್ಲಿ ನಡೆದರೂ ಕಾಂಗ್ರೆಸ್ ಈ ಬಿಲ್ ಗೆ ವಿರೋಧಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಯಾರೂ ಆಸೆ, ಆಮಿಷ ಹಾಗೂ ಬಡತನದಿಂದಾಗಿ ಮತಾಂತರವಾಗಬಾರದು. ಕಾನೂನು ಬದ್ಧವಾಗಿಯೇ ಇನ್ನೊಂದು ಧರ್ಮಕ್ಕೆ ಹೋಗಬಹುದು. ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ 2 ತಿಂಗಳ ನಂತರ ಮತಾಂತರವಾಗಬಹುದು ಎಂದು ಈಶ್ವರಪ್ಪ ಹೇಳಿದ್ದಾರೆ.