ಕೌಟಿಂಬಿಕ ದೌರ್ಜನ್ಯದ ವಿರುದ್ದ ಸಂವಾದ

ಕೌಟಿಂಬಿಕ ದೌರ್ಜನ್ಯದ ವಿರುದ್ದ ಸಂವಾದ
ಹುಬ್ಬಳ್ಳಿ,
ಹುಬ್ಬಳ್ಳಿಯಲ್ಲಿ ಹೆರಿಟೇಜ್ ಸ್ತ್ರೀ ಸಕ್ಷಮನ್ವಯ ಕೌಟುಂಬಿಕ ದೌರ್ಜನ್ಯದ ವಿರುದ್ದ ಸಂವಾದ ನಡೆಸಲಾಯಿತು. ನಗರದ ಖಾದಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ರೋಟರಿ ಕ್ಲಬ್ ಹುಬ್ನಳ್ಳಿ ಹೆರಿಟೇಜ್ ವತಿಯಿಂದ ಈ ಸಂವಾದ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ರಾಜ್ ನಗರದ ಸರಕಾರಿ ಕಾಲೇಜಿನ ಪ್ರಾಧ್ಯಾಪಕರಾದ ನಳಿನಿ ಬೆಂಗೇರಿಯವರು ಕೌಟುಂಬಿಕ ದೌರ್ಜನ್ಯದ ವಿರುದ್ದ ಧ್ವನಿ ಎತ್ತಲು ಇರುವ ಕಾನೂನು ಸಹಾಯಗಳು, ಆರ್ಥಿಕವಾಗಿ, ಸಾಮಾಜಿಕವಾಗಿ ಮಹಿಳೆಯರು ಸಬಲರಾಗಲು ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡದರು. ಗೋಪನಕೊಪ್ಪ, ಬೆಂಗೇರಿ, ಸೇರಿದಂತೆ ಸುತ್ತಲಿನ ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೋಟರಿ ಸಂಸ್ಥೆಯ ಅಧ್ಯಕ್ಣರಾದ ರೊಟೇರಿಯನ್ ಅನಂತರಾಜ್ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಶಿವಪ್ರಸಾದ ಪಿ.ಬೇಕಲ್ ರೋಟರಿ ಸಂಸ್ಥೆಗಳವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ರೋಟರಿ ಸಂಸ್ಥೆಯ ಸದಸ್ಯರಾದ ನಿಂಫಾ ಬೇಕಲ್, ಪ್ರಸನ್ನಕುಮಾರ ಕುರ್ತಕೋಟಿ, ಸಿ.ಬಿ. ಪಾಟೀಲ , ಸಿ. ಬಿ. ಪಾಟೀಲ, ಸಿ.ಎಸ್. ಕುಬಿಹಾಳ, ಶ್ರೀಮತಿ ವಿನೋದಾ ಕುರ್ತಕೋಟಿ, ತಾರಾ ಪೋಳ, ಶಾಂತರಾಜ್ಪೋಳ, ಕರುಣಾದೇವಿ ಕುಬಿಹಾಳ, ಹಾಗೂ ಡಾ: ಕಾವೇರಿ ಹಿರೇಮಠ ಉಪಸ್ಥಿತರಿದ್ದರು.