ಪುನೀತ್ ಇದ್ದಾಗಲೂ ಸಾಕಷ್ಟು ಜನರಿಗೆ ಮಾದರಿಯಾಗಿದ್ರು, ಅಗಲಿದ ಬಳಿಕವು ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ: ನಿರ್ದೇಶಕ ಚೇತನ್ ಕುಮಾರ್

ಇವತ್ತು ನಾನು ನಿರ್ದೇಶಕನಾಗಿರಲು ಪುನೀತ್ ರಾಜ್ ಕುಮಾರ್ ಅವರೇ ಕಾರಣ. ಅಪ್ಪು ಇಲ್ಲದೆ ಒಂದು ವರ್ಷ ಹೇಗೆ ಕಳೆದಿದೆ ಅನ್ನೋದೆ ಗೊತ್ತಾಗುತ್ತಿಲ್ಲ ಎಂದು ಜೇಮ್ಸ್ ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದಾರೆ.
ಪುನೀತ್ ಇಲ್ಲದ ನೋವಿನಲ್ಲೇ ಮಾತನಾಡಿದ ಚೇತನ್, ಪುನೀತ್ ಸರ್ ಇಲ್ಲ ಅನ್ನೋದನ್ನ ಇನ್ನೂ ನಂಬೋಕೆ ಆಗುತ್ತಿಲ್ಲ.
ಕೊನೆಯ ಚಿತ್ರ ನಿರ್ದೇಶನ ಸಂದರ್ಭದಲ್ಲಿ ಅಪ್ಪು ಸರ್ ಕೊನೆಯ ದಿನಗಳಲ್ಲಿ ನಾನು ಜೊತೆಗಿದ್ದೆ. ಅಗಲಿಕೆಗೂ ಮೂರು ದಿನ ಮುನ್ನ ಅವರ ಮನೆಯಲ್ಲೇ ಫೋಟೋಶೂಟ್ ಮಾಡಿದ್ದೆವು. ಒಂದು ವರ್ಷ ಆಗಿದ್ದೆ ಗೊತ್ತಾಗಲಿಲ್ಲ. ಅಪ್ಪು ಸರ್ ಎಲ್ಲೂ ಹೋಗಿಲ್ಲ. ನಮ್ಮ ಮನದಲ್ಲೇ ಇದ್ದಾರೆ ಎಂದು ಚೇತನ್ ಹೇಳಿದರು.