ಗೂಗಲ್​ ಟಾಪ್​ 5' ಪಟ್ಟಿಯಲ್ಲಿ ಕಾಂತಾರ, ಕೆಜಿಎಫ್​ 2

ಗೂಗಲ್​ ಟಾಪ್​ 5' ಪಟ್ಟಿಯಲ್ಲಿ ಕಾಂತಾರ, ಕೆಜಿಎಫ್​ 2

2022ರ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ವಿಶೇಷವಾಗಿದೆ. ಈ ವರ್ಷ ಕನ್ನಡದ ಹಲವು ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿವೆ. ಅದರಲ್ಲೂ ಯಶ್​ ನಟನೆಯ ‘ಕೆಜಿಎಫ್​- 2’ & ರಿಷಬ್​ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾಗಳು ಮಾಡಿದ ಮೋಡಿಗೆ ಸಾಟಿಯೇ ಇಲ್ಲ. ಗೂಗಲ್​ ಹುಡುಕಾಟದಲ್ಲಿಯೂ ‘ಕಾಂತಾರ’ & ‘ಕೆಜಿಎಫ್​ 2’ ಸಿನಿಮಾಗಳು ಸದ್ದು ಮಾಡಿವೆ. 2022ರಲ್ಲಿ ಜನರು ಅತಿ ಹೆಚ್ಚು ಸರ್ಜ್​ ಮಾಡಿದ ಭಾರತದ ಟಾಪ್ 5 ಸಿನಿಮಾಗಳಲ್ಲಿ ಈ ಎರಡು ಚಿತ್ರಗಳು ಸ್ಥಾನ ಪಡೆದುಕೊಂಡಿವೆ.