ಕನ್ನಡದ 'ಬಂಗಾರದ ಹೂವು' ಚಿತ್ರ ಖ್ಯಾತಿಯ ಹಿರಿಯ ನಟಿ ಶೈಲಶ್ರೀ ಆಸ್ಪತ್ರೆಗೆ ದಾಖಲು

ಕನ್ನಡದ 'ಬಂಗಾರದ ಹೂವು' ಚಿತ್ರ ಖ್ಯಾತಿಯ ಹಿರಿಯ ನಟಿ ಶೈಲಶ್ರೀ ಆಸ್ಪತ್ರೆಗೆ ದಾಖಲು

ಬೆಂಗಳೂರು : 1967ರಲ್ಲಿ 'ಬಂಗಾರದ ಹೂವು' ಚಿತ್ರದಲ್ಲಿ ರಾಜ್ ಕುಮಾರ್ ಜತೆ ನಟಿಸಿದ್ದ ಹಿರಿಯ ನಟಿ ಶೈಲಶ್ರೀ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿ ಶೈಲಶ್ರೀ ಬೆಂಗಳೂರಿನ ಆರ್.ಆರ್.

ನಗರದಲ್ಲಿರುವ ಆಸ್ಪತ್ರೆಗೆ ಹಿರಿಯ ನಟಿ ಶೈಲಶ್ರೀ ದಾಖಲಾಗಿದ್ದು, ಚಿಕಿತ್ಸೆ ಪಡೆಯಲು ಆರ್ಥಿಕ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಶೈಲಶ್ರೀ ಖ್ಯಾತ ನಟ ಸುದರ್ಶನ್ ಅವರ ಪತ್ನಿಯಾಗಿದ್ದು, ಸದ್ಯ ಚಿಕಿತ್ಸೆಗಾಗಿ ಹಣ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

1967ರಲ್ಲಿ 'ಬಂಗಾರದ ಹೂವು' ಚಿತ್ರದಲ್ಲಿ ರಾಜ್ಕುಮಾರ್ ಜತೆ ಶೈಲಶ್ರೀ ನಟಿಸಿದ್ದರು. ನಂತರ ಸಿನಿಮಾ ರಂಗದಿಂದ ಬಹಳ ದೂರ ಉಳಿದಿದ್ದರು.