ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಸುಖು ಪ್ರಮಾಣ ವಚನ ಸ್ವೀಕಾರ

ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಸುಖು ಪ್ರಮಾಣ ವಚನ ಸ್ವೀಕಾರ

ಶಿಮ್ಲಾ: ಕಾಂಗ್ರೆಸ್ ನಾಯಕ ಸುಖ್ವಿಂದರ್ ಸಿಂಗ್ ಸುಖು ಅವರು ಹಿಮಾಚಲ ಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, ಈ ವೇಳೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹಾಜರಿದ್ದರು.

ಇದಲ್ಲದೇ ಸಿಎಂ ಹುದ್ದೆಯ ರೇಸ್ನಲ್ಲಿದ್ದ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥೆ ಪ್ರತಿಭಾ ಸಿಂಗ್ ಅವರು ಶಿಮ್ಲಾದಲ್ಲಿ ನಿಯೋಜಿತ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು

ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ, ಕಾಂಗ್ರೆಸ್ ತನಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬಕ್ಕೆ ಕೃತಜ್ಞನಾಗಿದ್ದೇನೆ ಸುಖ್ವಿಂದರ್ ಸಿಂಗ್ ಸುಖು ಎಂದು ಹೇಳಿದರು.

'ಸಾಮಾನ್ಯ ಕುಟುಂಬದಿಂದ ಬಂದಿದ್ದರೂ ನಾನು ಸಿಎಂ ಆಗಲಿದ್ದೇನೆ ಎಂದು ನನಗೆ ಸಂತೋಷವಾಗಿದೆ. ನನಗೆ ಈ ಅವಕಾಶ ನೀಡಿದ್ದಕ್ಕಾಗಿ ನಾನು ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬಕ್ಕೆ ಆಭಾರಿಯಾಗಿದ್ದೇನೆ. ನನ್ನ ತಾಯಿ ನನ್ನನ್ನು ರಾಜಕೀಯದಲ್ಲಿರುವುದನ್ನು ಎಂದಿಗೂ ತಡೆಯಲಿಲ್ಲ. ಅವರ ಆಶೀರ್ವಾದದಿಂದಾಗಿ ನಾನು ಇಂದು ಇಲ್ಲಿಗೆ ತಲುಪಿದ್ದೇನೆ' ಎಂದು ಸುಖು ಹೇಳಿದರು.