ಇನ್ಮುಂದೆ `DL' ಮಾಡಿಸೋದು ಮತ್ತಷ್ಟು ಸುಲಭ : ಕುಳಿತಲ್ಲಿಯೇ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು!

ಬೆಂಗಳೂರು: ಇದುವರೆಗೆ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಅನೇಕ ಸಾರಿಗೆ ಸೇವೆಗಳನ್ನು) ಕಚೇರಿಗೆ ತೆರಳಿಯೇ ಪಡೆಯಬೇಕಿತ್ತು. ಎಲ್ಲಾ ಕೆಲಸ ಬಿಟ್ಟು ಸಾರಿಗೆ ಇಲಾಖೆಯ ಕಚೇರಿಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ಪಡೆಯಬೇಕಿತ್ತು.
ಹೌದು.. ಸಾರಿಗೆ ಇಲಾಖೆಗೆ ಸಂಬಂಧಿಸಿದಂತ ಅನೇಕ ಸೇವೆಗಳನ್ನು ಈಗ ಅನ್ ಲೈನ್ ಮೂಲಕ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಡ್ರೈವಿಂಗ್ ಲೈಸೆನ್ಸ್ ಸಂಬಂಧಿತ ಅನೇಕ ಸೇವೆಗಳು ಸಂಪರ್ಕ ರಹಿತವಾಗಿ ಸಾರಿಗೆ ಇಲಾಖೆ ಜಾಲತಾಣದ ಮೂಲಕ ಆನ್ ಲೈನ್ ನಲ್ಲಿಯೇ ಅಪ್ಲೈ ಮಾಡಿ ಪಡೆಯಬಹುದಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಹೊಸ ನಿಯಮಗಳನ್ನು 1 ಜುಲೈ 2022 ರಿಂದ ಜಾರಿಗೆ ತರಲಾಗಿದ್ದು, ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ನವೀಕರಣ, ನಕಲು ಪ್ರತಿ, ವಿಳಾಸ ಬದಲಾವಣೆ, ಹೆಸರು ಬದಲಾವಣೆ ಸೇರಿದಂತೆ ಇತರೆ ಸಾರಿಗೆ ಸೇವೆಗಳನ್ನು ಸಂಪರ್ಕ ರಹಿತವಾಗಿ ಭೇಟಿ ನೀಡಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು ಡಿ.ಎಲ್ ಪಡೆಯಬಹುದು, ಸರಿಪಡಿಸಬಹುದು ಎಂದು ತಿಳಿಸಿದೆ.