ಬೆಂಗಳೂರು ಮಾಣೆಕ್ ಷಾ ಮೈದಾನದಲ್ಲಿ ಗಣರಾಜ್ಯೋತ್ಸವಕ್ಕೆ ಸಿದ್ಧತೆ : ಭದ್ರತೆಗಾಗಿ ಪೊಲೀಸರಿಂದ ಹೈಅಲರ್ಟ್‌

ಬೆಂಗಳೂರು ಮಾಣೆಕ್ ಷಾ ಮೈದಾನದಲ್ಲಿ ಗಣರಾಜ್ಯೋತ್ಸವಕ್ಕೆ ಸಿದ್ಧತೆ : ಭದ್ರತೆಗಾಗಿ ಪೊಲೀಸರಿಂದ ಹೈಅಲರ್ಟ್‌

ಬೆಂಗಳೂರು : ಮಾಣೆಕ್ ಷಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದ್ದ, ನಗರಾದ್ಯಂತ ಪೊಲೀಸರಿಂದ ಹೆಚ್ಚಿನ ಭದ್ರತೆಯೊಂದಿಗೆ ಹೈಅಲರ್ಟ್‌ ಘೋಷಣೆ ಮಾಡಲಾಗಿದೆ.ಬೆಂಗಳೂರಲ್ಲಿ ಭದ್ರತೆಗೆ 1200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. 9 ಡಿಸಿಪಿ, 16 ಎಸಿಪಿ.45 ಇನ್ಸ್‌ಪೆಕ್ಟರ್‌ಗಳು , 101 ಪಿಎಸ್‌ಐ, 14 ಮಹಿಳಾ ಪಿಎಸ್‌ಐ,83 ಎಎಸ್‌ಐ, 577 ಹೆಡ್‌ ಕಾನ್ಸ್‌ಟೇಬಲ್‌ 77 ಮಹಿಲಾ ಸಿಬ್ಬಂದಿ, ಮಪ್ತಿಯಲ್ಲಿ 172 ಸಿಬ್ಬಂದಿ ನಿಯೋಜನೆ ಹೆಚ್ಚುವರಿ ಭದ್ರತೆಗಾಗಿ 10 ಕೆಎಸ್‌ಆರ್‌ಪಿ ತುಕುಡಿ, ಸಿಎಆರ್‌ ತುಕುಡಿ, ಮಾಣಿಕ್‌ ಷಾ ಮೈದಾನದ ಸುತ್ತಮುತ್ತ 56 ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ನಗರಾದ್ಯಂತ ಪೊಲೀಸರಿಂದ ಹೈಅಲರ್ಟ್‌ ಮಾಡಲಾಗಿದೆ.