ಪರಿಸರ ರಾಯಭಾರಿಯಾಗಿ ಸಾಲುಮರದ ತಿಮ್ಮಕ್ಕ: ಸರ್ಕಾರ ಘೋಷಣೆ

ಪರಿಸರ ರಾಯಭಾರಿಯಾಗಿ ಸಾಲುಮರದ ತಿಮ್ಮಕ್ಕ: ಸರ್ಕಾರ ಘೋಷಣೆ

ಅಪಾರ ಪರಿಸರ ಕಾಳಜಿ ಹೊಂದಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರನ್ನು ಪರಿಸರ ರಾಯಭಾರಿ ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ. ಸಾಧನೆ ಮಾಡಲಿಕ್ಕೆ ಯಾವುದೇ ಪದವಿ ಬೇಕಿಲ್ಲ. ಯಾರ ನೆರವು ಬೇಕಿಲ್ಲ. ಯಾವ ಅವಕಾಶವೂ ಬೇಕಿಲ್ಲ. ಒಂದು ಧ್ಯೇಯ ಇದ್ದರೆ, ಕಾಯಕ ನಿಷ್ಠೆ ಮಾಡಿಕೊಂಡು ಸರ್ವರಿಗೂ ಒಳಿತು ಮಾಡುವ ಕೆಲಸ ಮಾಡಿದರೆ ಇಡೀ ಜಗತ್ತಿನಲ್ಲಿ ಬದಲಾವಣೆ ಮಾಡುವ ಪ್ರಭಾವಿಶಕ್ತಿ ಆಗಬಹುದು.

ಇದಕ್ಕೆ ನಮ್ಮ ಕರ್ನಾಟಕದಲ್ಲಿ ನಮ್ಮ ನಡುವೆ ಇರುವುದು ಸಾಲುಮರದ ತಿಮ್ಮಕ್ಕ ಅವರು ಸಾಕ್ಷಿ.

ಜೀವನದಲ್ಲಿ ಎರಡು ಕೆಲಸ ಬಹಳ ಕಠಿಣ. ಹುಟ್ಟಿದಾಗ ಮುಗ್ಧತೆಯಿಂದ ಇರುತ್ತೇವೆ. ಮುಂದೆ ಮುಗ್ಧತೆಯನ್ನು ಕಳೆದುಕೊಳ್ಳುತ್ತೇವೆ. ಮುಗ್ಧತೆಯನ್ನು ಕೊನೆವರೆಗೂ ಇಟ್ಟುಕೊಳ್ಳುವುದು ಬಹಳ ಕಠಿಣ. ಸದಾ ಕಾಲ ಆತ್ಮಸಾಕ್ಷಿಯಿಂದ ನಡೆದುಕೊಳ್ಳುವುದು ಕಠಿಣ. ಈ ಎರಡು ಜಯಿಸಿದವರು ದೇವ ಮಾನವರು. ಸಾಲು ಮರದ ತಿಮ್ಮಕ್ಕ ಅಜ್ಜಿ ಅವರ ಮುಖದಲ್ಲಿ ಮಗುವಿನ ಮುಗ್ಧತೆ ಇದೆ. ಅದು ಅವರ ಪ್ರಜ್ವಲವಾದ ಮನಸ್ಸು, ಶುದ್ಧ ಅಂತಃಕರಣಕ್ಕೆ ಹಿಡಿದ ಗನ್ನಡಿ. ಈ ಪರಿಸರ ಪ್ರೇಮಿ ಕಾಯಕಯೋಗಿ ಸಾಲುಮರದ ತಿಮ್ಮಕ್ಕ ಅವರಿಗೆ ರಾಜ್ಯ ಸರ್ಕಾರ ಪರಿಸರ ರಾಯಭಾರಿಯಾಗಿ ಘೋಷನೆ ಮಾಡಿದೆ. ಸಾಲುಮರದ ತಿಮ್ಮಕ್ಕನವರಿಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಅವರ ಜೀವನಗಾಥೆ ಕುರಿತು ಅನೇಕ ಡಾಕ್ಯುಮೆಂಟರಿಗಳಿವೆ. ಲೇಖನಗಳು ಪ್ರಕಟವಾಗಿವೆ.

ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ : ತಿಮ್ಮಕ್ಕ ಅವರು ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರು. ತಂದೆ ಚಿಕ್ಕರಂಗಯ್ಯ. ತಾಯಿ ವಿಜಯಮ್ಮ. ಇವರಿಗೆ ಕೌಟುಂಬಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಯಾವುದೇ ಔಪಚಾರಿಕ ಶಿಕ್ಷಣ ಸಿಕ್ಕಿಲ್ಲ. ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿದ್ದರು. ಇವರು ಚಿಕ್ಕಯ್ಯ ಎಂಬುವವರನ್ನು ವಿವಾಹವಾಗಿದ್ದರು. ಅವರು ವೃತ್ತಿಯಲ್ಲಿ ಗೋಪಾಲಕರಾಗಿದ್ದು, ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದವರು. ಮದುವೆ ಬಳಿಕ ಸಾಲುಮರದ ತಿಮ್ಮಕ್ಕ ಅವರು 1950 ಮತ್ತು 1970 ರ ಅವಧಿಯಲ್ಲಿ ಹುಲಿಕಲ್-ಕುದೂರು ಹೆದ್ದಾರಿಯಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ 385 ಮರಗಳನ್ನು ನೆಟ್ಟು ಬೆಳೆಸಿದ್ದರು. ತಿಮ್ಮಕ್ಕ ಅವರು 2019ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಪಡೆದಿದ್ದರು.ಸಾಲುಮರದ ತಿಮ್ಮಕ್ಕನವರಿಗೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ಅವರ ಜೀವನಗಾಥೆ ಕುರಿತು ಅನೇಕ ಡಾಕ್ಯುಮೆಂಟರಿಗಳನ್ನು ಮಾಡಿದ್ದಾರೆ. ಲೇಖನಗಳು ಪ್ರಕಟವಾಗಿವೆ. 

ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ :

ಕಳೆದ ವಾರವಷ್ಟೇ ಸಾಲುಮರದ ತಿಮ್ಮಕ್ಕನವರ 111ನೇ ಜನ್ಮದಿನದ ಸಂಭ್ರಮವನ್ನು ಆಚರಿಸಲಾಯಿತು. ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ಜೂನ್‌ 30ರಂದು ಆಯೋಜಿಸಲಾಗಿದ್ದ ಸಾಲುಮರದ ತಿಮ್ಮಕ್ಕನವರ 111ನೇ ಜನ್ಮದಿನದ ಸಂಭ್ರಮ ಮತ್ತು ಅವರಿಗೆ ಗ್ರೀನರಿ ಅವಾರ್ಡ್‌ ನೀಡುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರು, ತಿಮ್ಮಕ್ಕನವರಿಗೆ ಬಂಗಾರದ ಕಡಗವನ್ನು ತೊಡಿಸಿ, ರಾಜ್ಯದ ಪರಿಸರ ರಾಯಭಾರಿ ಎಂದು ಘೋಷಿಸಿದ್ದರು. ಅಲ್ಲದೆ, ಕ್ಯಾಬಿನೆಟ್‌ ದರ್ಜೆ ಸ್ಥಾನಮಾನವನ್ನೂ ನೀಡುವುದಾಗಿ ಹೇಳಿದ್ದರು.

ಪರಿಸರ ಕಾಳಜಿಗಾಗಿ ಬೇಲೂರು ತಾಲೂಕಿನಲ್ಲಿ 10 ಎಕರೆ ಭೂಮಿ

ಸಾಲುಮರದ ತಿಮ್ಮಕ್ಕನವರ ಜೀನವಗಾಥೇಯನ್ನು ವೆಬ್‌ಸೀರೀಸ್‌ ಮಾಡುವುದಕ್ಕೆ ವಾರ್ತಾ ಇಲಾಖೆಗೆ ಸೂಚಿಸಲಾಗಿದೆ. ಅವರ ಕೆಲಸಗಳು ಎಲ್ಲರಿಗೂ ಪ್ರೇರಣೆಯಾಗಬೇಕು. ಮುಂದಿನ ತಲೆಮಾರಿನವರಿಗೆ ಈ ವಿಚಾರ ಮುಂದುವರಿಯಬೇಕು. ಸಾಲು ಮರದ ತಿಮ್ಮಕ್ಕನವರ ಪರಿಸರ ಕಾಳಜಿಗಾಗಿ ಬೇಲೂರು ತಾಲೂಕಿನಲ್ಲಿ 10 ಎಕರೆ ಭೂಮಿ ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಸಾಲುಮರದ ತಿಮ್ಮಕ್ಕನವರಿಗೆ ಸರ್ಕಾರವೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನದಲ್ಲಿಮನೆ ನಿಮಾಣ ಮಾಡಿ ಉಡುಗೊರೆಯಾಗಿ ನೀಡಲಿದೆ. ರಾಜ್ಯದ ಯಾವುದೇ ಪ್ರದೇಶಕ್ಕೆ ಪರಿಸರ ರಕ್ಷಣೆ ಮಾಡುವುದಕ್ಕೆ ತೆರಳುವುದಾದರೂ ಸರ್ಕಾರವೇ ಅದರ ಖರ್ಚುವೆಚ್ಚವನ್ನು ನೋಡಿಕೊಳ್ಳಲಿದೆ. ಹೊರ ರಾಜ್ಯಕ್ಕೆ ತೆರಳುವುದಾದರೂ ಅದರ ಖರ್ಚು ವೆಚ್ಚ ಕೂಡ ಸರ್ಕಾರವೇ ವಹಿಸಲಿದೆ. ಇದಕ್ಕಾಗಿಯೇ ಅವರಿಗೆ ಕ್ಯಾಬಿನೆಟ್‌ ಸ್ಥಾನಮಾನ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. 

ಪರಿಸರ ಶುದ್ಧೀಕರಣ ಪ್ರಚಾರ : ಸಾಲುಮರದ ತಿಮ್ಮಕ್ಕ ಅವರನ್ನು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ನಾಲ್ಕು ಕಿ.ಮೀ. ಮರಗಳನ್ನು ನೆಟ್ಟು ನೀರು ಹಾಕಿ ಪೋಷಣೆ ಮಾಡಿರುವುದು ಅಸಾಮಾನ್ಯ. ಸಾಲುಮರದ ತಿಮ್ಮಕ್ಕ ಪ್ರೇರಣಾ ಶಕ್ತಿ. ಸಾಲ ಮರದ ತಿಮ್ಮಕ್ಕ ಪ್ರಚಾರ ಅಂದ್ರೆ ಪರಿಸರ ಶುದ್ಧೀಕರಣ ಪ್ರಚಾರ. ಪರಿಸರ ದಿನನಿತ್ಯ ಕಲುಷಿತಗೊಳ್ಳುತ್ತಿದೆ. 20 ವರ್ಷದಿಂದ ಪರಿಸರ ತುಂಬಾ ಜಾಸ್ತಿ ಕಲುಷಿತವಾಗುತ್ತಿದೆ. ಈ ಎಲ್ಲಾ ಪರಿಸರ ನಾಶಕ್ಕೆ ನಾವೇ ಕಾರಣ. ಆದರೆ ಸಾಲುಮರದ ತಿಮ್ಮಕ್ಕನಂತರವರು ಒಬ್ಬರು ಪರಿಸರ ರಕ್ಷಣೆಗೆ ಮಾದರಿ.