ಸಿಬಿಐನಿಂದ ಆಸ್ತಿ ಮುಟ್ಟುಗೋಲು; ಖಡಕ್ ಪ್ರತಿಕ್ರಿಯೆ ಕೊಟ್ಟ ಜನಾರ್ದನ ರೆಡ್ಡಿ

ಸಿಬಿಐನಿಂದ ಆಸ್ತಿ ಮುಟ್ಟುಗೋಲು; ಖಡಕ್ ಪ್ರತಿಕ್ರಿಯೆ ಕೊಟ್ಟ ಜನಾರ್ದನ ರೆಡ್ಡಿ

ರಾಯಚೂರು,"ಕಷ್ಟಪಟ್ಟು ದುಡಿದ ಗಂಡುಮಗ ನಾನು, ಅಡ್ಡಾದಿಡ್ಡಿ ಮಾಡಿದ ದುಡ್ಡು ಅಲ್ಲ. ನನ್ನ ಆಸ್ತಿ ಮುಟ್ಟುಗೋಲು ಹಾಕಲು ನೂರು ಜನ್ಮ ಹುಟ್ಟಿ ಬರಬೇಕು" ಎಂದು ಮಾಜಿ ಸಚಿವ, ಕಲ್ಯಾಣ ಪ್ರಗತಿ ರಾಜ್ಯ ಪಕ್ಷದ ಸ್ಥಾಪಕಶುಕ್ರವಾರ ರಾಯಚೂರಿನಲ್ಲಿ ಮಾಧ್ಯಮಗಳ ಜೊತೆ ಜನಾರ್ದನ ರೆಡ್ಡಿ ಮಾತನಾಡಿದರು. ಸಿಬಿಐ ಜನಾರ್ದನ ರೆಡ್ಡಿ ಆಸ್ತಿ ಜಪ್ತಿ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿರುವ ಕುರಿತು ಪ್ರತಿಕ್ರಿಯೆ ನೀಡಿದರು.ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾನು ಒಬ್ಬ ಸಾಮಾನ್ಯ ಪೊಲೀಸ್ ಕಾನ್ಸ್‌ಟೇಬಲ್ ಮಗ. ನನ್ನ ಆಸ್ತಿ ಮುಟ್ಟುಗೋಲು ಹಾಕಲು ನೂರು ಜನ್ಮ ಎತ್ತಿ ಬರಬೇಕು" ಎಂದು ಸವಾಲು ಎಸೆದರು.