`GST' ಯಿಂದ ಕರ್ನಾಟಕಕ್ಕೆ 20 ಸಾವಿರ ಕೋಟಿ ನಷ್ಟ : ಮಾಜಿ ಸಿಎಂ ಸಿದ್ದರಾಮಯ್ಯ
ನವದೆಹಲಿ : ಕೇಂದ್ರ ಸರ್ಕಾರದ ಜಿಎಸ್ ಟಿಯಿಂದ ರಾಜ್ಯಕ್ಕೆ 20 ಸಾವಿರ ಕೋಟಿ ರೂ.ನಷ್ಟವಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್ ಟಿ ಜಾರಿಯಾದ ನಂತರ ರಾಜ್ಯಗಳು ಅನುಭವಿಸುತ್ತಿರುವ ನಷ್ಟವನ್ನು ತುಂಬಿಕೊಡಲು ಕೇಂದ್ರ ಸರ್ಕಾರ ಪರಿಹಾರ ಒದಗಿಸುತ್ತಿತ್ತು. ಈ ಪ್ರಕ್ರಿಯೆ ಇಂದಿಗೆ ಅಂತ್ಯವಾಗುತ್ತಿದ್ದು, ಇದರಿಂದ ರಾಜ್ಯಕ್ಕೆ 20 ಸಾವಿರ ಕೋಟಿಯಷ್ಟು ನಷ್ಟವಾಗಲಿದೆ. ಹೀಗಾಗಿ ಇನ್ನೂ ಐದು ವರ್ಷ ಜಿಎಸ್ ಟಿ ಪರಿಹಾರ ನೀಡಬೇಕು ಎಂದು ಕೋರಿದ್ದಾರೆ. ಇನ್ನು ಕೇಂದ್ರ ಸರ್ಕಾರವು ಜಿಎಸ್ ಟಿ ಮೊತ್ತ ಹೆಚ್ಚಿಸಲಾಗಿದೆ. ಕೃಷಿ ಉಪಯೋಗಿ ಪೈಪು, ಹಾಲು ಕರೆಯುವ ಮಿಷನ್ ಗಳ ಮೇಲೆ ಶೇ. 12 ರಿಂದ 18 ಕ್ಕೆ, ಸೋಲಾರ್ ಉಪಕರಣಗಳ ಮೇಲೆ ಶೇ. 5 ರಿಂದ 12 ಕ್ಕೆ ಜಿಎಸ್ ಟಿ ಹೆಚ್ಚಿಸಲಾಗಿದೆ ಎಂದು ಟೀಕಿಸಿದ್ದಾರೆ.