ಇಂದು ಐಪಿಎಲ್ ಮಿನಿ ಹರಾಜು; ಯಾವ ಚಾನೆಲ್‍ನಲ್ಲಿ ನೇರ ಪ್ರಸಾರ
2023ರ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಇಂದು ಕೇರಳದ ಕೊಚ್ಚಿಯಲ್ಲಿ, ಮಧ್ಯಾಹ್ನ 2.30ರಿಂದ ಆರಂಭವಾಗಲಿದೆ. ಹರಾಜು ಪ್ರಕ್ರಿಯೆ ಒಂದು ದಿನ ಮಾತ್ರ ನಡೆಯಲಿದೆ. ಮಿನಿ ಹರಾಜಿನ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‍ವರ್ಕ್‍ನ ಚಾನೆಲ್‍ನಲ್ಲಿ ನೋಡಬಹುದು. ಇನ್ನು ಒಟಿಟಿ ವೇದಿಕೆ 'VOOT' ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ. 405 ಆಟಗಾರರ ಹೆಸರನ್ನು ಹರಾಜಿಗೆ ಅಂತಿಮಗೊಳಿಸಲಾಗಿದೆ. ಇದರಲ್ಲಿ 273 ಭಾರತೀಯರು & 132 ವಿದೇಶಿ ಆಟಗಾರರು ಸೇರಿದ್ದಾರೆ.