ಕಡಲೆ ಬೀಜಕ್ಕಾಗಿ ನೂಕುನುಗ್ಗಲು 

ಅಣ್ಣಿಗೇರಿ

ಮುಂಗಾರು ಮುಗಿಸಿ ಹಿಂಗಾರು ಬೆಳೆಯ ಪ್ರಮುಖವಾದ ಕಡಲೆ ಬೀಜವನ್ನು ರೈತರು ಖರೀದಿ ಮಾಡಲು ತಾಲೂಕಿನ ಗ್ರಾಮಗಳಿಂದ ಅಣ್ಣಿಗೇರಿ ನಗರದ ರೈತ ಸಂಪರ್ಕ ಕೇಂದ್ರದತ್ತ ಧಾವಿಸುತ್ತಿದ್ದಾರೆ. ಸೋಮವಾರ ಅಣ್ಣಿಗೇರಿ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಮುಂಜಾನೆಯಿಂದಲೇ ಕಡಲೆ ಬೀಜವನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಮುಂಜಾನೆ ಕಳೆದು ಸಂಜೆಯಾದರೂ ರೈತರು ಕಡಲೆ ಬೀಜ ಖರೀದಿ ಮಾಡುವಲ್ಲಿ ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಈಗಾಗಲೇ ರೈತ ಸಂಪರ್ಕದ ದಾಸನು ಕೇಂದ್ರದಲ್ಲಿ 1900 ಪ್ಯಾಕೇಟ್ಗಳಿವೆ. ಇದು ಮುಗಿದ ಮೇಲೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.