ಪಠ್ಯ ಪುಸ್ತಕ ತಿರುಚಿ ಸಾಂಸ್ಕೃತಿಕ ಭಯೋತ್ಪಾದನೆ: ಸಿದ್ದರಾಮಯ್ಯ ಕಿಡಿ

ಪಠ್ಯ ಪುಸ್ತಕ ತಿರುಚಿ ಸಾಂಸ್ಕೃತಿಕ ಭಯೋತ್ಪಾದನೆ: ಸಿದ್ದರಾಮಯ್ಯ ಕಿಡಿ

ಹುಬ್ಬಳ್ಳಿ : ಪಠ್ಯ ಪುಸ್ತಕಗಳನ್ನು ತಿರುಚಿ ಬಿಜೆಪಿಯವರು ಸಾಂಸ್ಕೃತಿಕ ಭಯೋತ್ಪಾದನೆ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹರಿಹಾಯ್ದರು.
ಪಶ್ಚಿಮ ವಿಧಾನ‌ ಪರಿಷತ್  ಚುನಾವಣಾ ಪ್ರಚಾರಾರ್ಥವಾಗಿ ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲವಾದಿ ನಾರಾಯಣಸ್ವಾಮಿ ಅವರನ್ನು ಮುಂದಿಟ್ಟುಕೊಂಡು ಆರ್.ಎಸ್.ಎಸ್ ನವರು ಹೇಳಿಕೆ ಕೊಡುತ್ತಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆರ್.ಆರ್.ಎಸ್  ಸಹ ಸಂಚಾಲಕರು 97 ವರ್ಷಗಳಿಂದ ಚಡ್ಡಿ ತೊಡುತ್ತಿದ್ದಾರೆ. ಅಷ್ಟು ದಿನಗಳಿಂದ ದಲಿತರು, ಹಿಂದುಳಿದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆಯೇ ಎಂದು ಕೇಳಿದ್ದೆ. ಈ ವಿಷಯಗಳನ್ನು ತಿಳಿದುಕೊಳ್ಳಿ ಎಂದು ಅವರಿಗೆ ನಾನು ಹೇಳಿದ್ದೆ ಎಂದರು.
9 ಲೈವ್ ನ್ಯೂಸ್ ಹುಬ್ಬಳ್ಳಿ