ಅಣ್ಣಿಗೇರಿ ಪೊಲೀಸರಿಂದ ಗಾಂಧಿ ಜಯಂತಿ ಆಚರಣೆ
ಧಾರವಾಡ ಜಿಲ್ಲೆಯ ಅಣ್ಣಿಗೇರಿ ನಗರದ ಜನಸ್ನೇಹಿ ಪೊಲೀಸ್ ಠಾಣೆಯ ವತಿಯಿಂದ ಗಾಂಧೀಜಯಂತಿಯ ನಿಮಿತ್ಯ ಗುರು ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಗರದ ಶಿಕ್ಷಕರಿಗೆ ಆರಕ್ಷಕ ಠಾಣೆ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಠಾಣೆಯ ಪಿಎಸ್ಐ ಲಾಲಸಾಬ್ ಜೂಲಕಟ್ಟಿ ಈ ಸಂದರ್ಭದಲ್ಲಿ ಮಾತನಾಡಿ ಯಾವುದೇ ಒಬ್ಬ ವ್ಯಕ್ತಿಯನ್ನು ಕತ್ತಲಿನಿಂದ ಬೆಳಕಿನ ಕಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ವ್ಯಕ್ತಿಯೇ ಗುರು, ಹೀಗಾಗಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ಹೇಳಿದ್ದಾರೆ. ಹೀಗಾಗಿ ಗುರುವಿನ ಮಾರ್ಗ ದರ್ಶನ ಅವಶ್ಯ ಎಂದರು.