ಶಂಕಿತ ಉಗ್ರ ಶಾರಿಕ್‍ಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ

ಶಂಕಿತ ಉಗ್ರ ಶಾರಿಕ್‍ಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ

ಮಂಗಳೂರು: Mangaluru Blast: ಶಂಕಿತ ಉಗ್ರ ಶಾರಿಕ್ ಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿರುವ ಬಗ್ಗೆ ಇದೀಗ ಮಾಹಿತಿ ಹೊರಬಿದ್ದಿದೆ.ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ್ದ ಆರೋಪಿಯ ಶ್ವಾಸಕೋಶದಲ್ಲಿ ಹೊಗೆ ತುಂಬಿಕೊಂಡ ಕಾರಣ ಆತನಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಕ್ಕರ್ ಬಾಂಬ್ ಸ್ಫೋಟದ ವೇಳೆ ಭಾರಿ ಪ್ರಮಾಣದ ಹೊಗೆ ಕಂಡುಬಂದಿತ್ತು. ಈ ವೇಳೆ ಹೊಗೆ ಶ್ವಾಸಕೋಶ ಪ್ರವೇಶಿಸಿದ್ದರಿಂದ ಶಂಕಿತನಿಗೆ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಆರೋಪಿ ಶಾರಿಕ್ ನ ಕುತ್ತಿಗೆಯ ಭಾಗದಲ್ಲಿ ಗಂಭೀರ ಗಾಯವಾಗಿದೆ. ಸ್ಫೋಟದ ವೇಳೆ ಕುಕ್ಕರ್ ನ ಮುಚ್ಚಳ ಕುತ್ತಿಗೆಗೆ ಬಡಿದು ಗಂಭೀರ ಗಾಯಗೊಂಡಿದ್ದು, ವೈದ್ಯರ ತಂಡ ವಿಶೇಷ ಚಿಕಿತ್ಸೆ ನೀಡುತ್ತಿದೆ. ಆಸ್ಪತ್ರೆಯಲ್ಲಿ ಇನ್ನೂ ಮೂರು ವಾರಗಳ ಕಾಲ ಚಿಕಿತ್ಸೆ ಮುಂದುವರೆಯುವ ಸಾಧ್ಯತೆಯಿದ್ದು, ಎಂಟು ಮಂದಿ ವೈದ್ಯರು ದಿನದ 24 ತಾಸು ನಿಗಾ ವಹಿಸುತ್ತಿದ್ದಾರೆ.ಆಟೋ ಚಾಲಕ, ಸಂತ್ರಸ್ತ ಪುರುಷೋತ್ತಮ್ ಗೂ ಸಮಾನ ರೀತಿಯ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಪಿ ಶಾರಿಕ್ ಗೆ ಇನ್ನೂ ಸಣ್ಣ ವಯಸ್ಸಾಗಿರುವುದರಿಂದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಸುಟ್ಟ ಗಾಯಗಳಾಗಿರುವುದರಿಂದ ಪರಿಸ್ಥಿತಿ ಸ್ಥಿರವಾಗಿದ್ದರೂ, ತೀರಾ ನಿಗಾ ವಹಿಸಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದೆ.