ಬಿಸಿಸಿಐ ಹೊಸ ನಿಯಮದ ವಿರುದ್ಧ ಕಿಡಿ ಕಾರಿದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್

ಬಿಸಿಸಿಐ ಹೊಸ ನಿಯಮದ ವಿರುದ್ಧ ಕಿಡಿ ಕಾರಿದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್

ಭಾರತ ಕ್ರಿಕೆಟ್ ಹಿರಿಯ ಪುರುಷರ ತಂಡಕ್ಕೆ ಆಯ್ಕೆಯಾಗಲು ಯೋ-ಯೋ ಮತ್ತು ಡೆಕ್ಸಾ ಫಿಟ್‌ನೆಸ್ ಪರೀಕ್ಷೆಗಳನ್ನು ಕಡ್ಡಾಯಗೊಳಿಸಿರುವ ಬಿಸಿಸಿಐ ಕ್ರಮವನ್ನು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ. ತಂಡಕ್ಕೆ ಆಯ್ಕೆಯಾಗಲು ಫಿಟ್ನೆಸ್ ಬೇಕು, ಆದರೆ ಈ ರೀತಿಯ ಟೆಸ್ಟ್‌ಗಳು ಅನಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಿಸಿಸಿಐ ತೀರ್ಮಾನವನ್ನು ವ್ಯಂಗ್ಯವಾಗಿ ಟೀಕಿಸಿರುವ ಅವರು, "ಬಯೋಮೆಕಾನಿಸ್ಟ್‌ಗಳು ಮತ್ತು ದೇಹ ವಿಜ್ಞಾನ ತಜ್ಞರು, ಆಯ್ಕೆಗಾರರಾಗಿ ಯಾಕಿಲ್ಲ" ಎಂದು ಕೇಳಿದ್ದಾರೆ.