ಧಾರವಾಡ: 5 ಲಕ್ಷ ರೂ. ಸಾಲ ಕೊಡಿಸುವುದಾಗಿ ಹೇಳಿ 3 ಲಕ್ಷ ರೂ. ವಂಚಿಸಿದ ಭೂಪ

ಲೋನ್‌ ಅಕೌಂಟ್‌ ತೆರೆಯಲು ತಿಳಿಸಿ ಅಪ್ರೂವಲ್‌ ಫೀಸು, ಇನ್ಸುರನ್ಸ್‌ ಫೀಸು, ಪಾಸ್ವರ್ಡ್‌ ಸೆಟ್ಟಿಂಗ್‌ ಚಾರ್ಜ್‌ ಎಂದು ಹಂತ ಹಂತವಾಗಿ 3,04,100 ರೂ. ಆನ್‌ಲೈನ್‌, ಎಟಿಎಂ ಮೂಲಕ ಡ್ರಾ ಮಾಡಿಕೊಂಡು ಬಳಿಕ ಸಾಲವನ್ನೂ ವಂಚಿಸಿದ್ದಾನೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಧಾರವಾಡ: 5 ಲಕ್ಷ ರೂ. ಸಾಲ ಕೊಡಿಸುವುದಾಗಿ ಹೇಳಿ 3 ಲಕ್ಷ ರೂ. ವಂಚಿಸಿದ ಭೂಪ
ಧಾರವಾಡ: ಪ್ರತಿಷ್ಠಿತ ಫೈನಾನ್ಸ್‌ ವೊಂದರಲ್ಲಿ ಶೇ. 5 ಬಡ್ಡಿ ದರದಲ್ಲಿ 5 ಲಕ್ಷ ರೂ. ಸಾಲ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿಯೊಬ್ಬ ಅಗತ್ಯ ದಾಖಲೆ ಪಡೆದು 3 ಲಕ್ಷ ರೂ. ಪಡೆದು ವಂಚನೆ ನಡೆಸಿದ ಬಗ್ಗೆ ನಗರದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಪಶ್ಚಿಮ ಬಂಗಾಳದ ಸದ್ಯ ನಿವಾಸಿ ಹಾರು ಆಸ್ಟೋಬೋರ್‌ ವಂಚನೆಗೆ ಒಳಗಾದವರು. ಕೊಲ್ಕತ್ತಾದಿಂದ ಕರೆ ಮಾಡುವುದಾಗಿ ಹೇಳಿದ ವಂಚಕ ಆಧಾರ್‌, ಪಾನ್‌, ಐಟಿ ರಿಟರ್ನ್‌ ಪಡೆದು ಫೈನಾನ್ಸ್‌ನಿಂದ 5 ಲಕ್ಷ ರೂ. ಸಾಲ ಮಂಜೂರಾಗಿದೆ ಎಂದು ನಂಬಿಸಿದ್ದಾನೆ. ಬಳಿಕ ಲೋನ್‌ ಅಕೌಂಟ್‌ ತೆರೆಯಲು ತಿಳಿಸಿ ಅಪ್ರೂವಲ್‌ ಫೀಸು, ಇನ್ಸುರನ್ಸ್‌ ಫೀಸು, ಪಾಸ್ವರ್ಡ್‌ ಸೆಟ್ಟಿಂಗ್‌ ಚಾರ್ಜ್‌ ಎಂದು ಹಂತ ಹಂತವಾಗಿ 3,04,100 ರೂ. ಆನ್‌ಲೈನ್‌, ಎಟಿಎಂ ಮೂಲಕ ಡ್ರಾ ಮಾಡಿಕೊಂಡು ಬಳಿಕ ಸಾಲವನ್ನೂ ವಂಚಿಸಿದ್ದಾನೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಚೆಕ್‌ ದುರುಪಯೋಗ: ದೂರು ಹುಬ್ಬಳ್ಳಿ: ಕೈಗಡ ಸಾಲ ಪಡೆಯುವಾಗ ಭದ್ರತೆಗಾಗಿ ಪಡೆದ ಮೂರು ಚೆಕ್‌ಗಳನ್ನು ದುರುಪಯೋಗ ಮಾಡಿಕೊಂಡಿದ್ದಲ್ಲದೆ, ತಿರುಗಿ ಆಗಿದೆ ಎಂದು ಪ್ರಕರಣ ದಾಖಲಿಸಿ ಮೋಸ ಮಾಡಿದ ಬಗ್ಗೆ ನಗರದ ಶಹರ ಪೊಲೀಸ್‌ ಠಾಣೆಯಲ್ಲಿದೂರು ದಾಖಲಾಗಿದೆ. ಮಾಲತೇಶ ನಿಂಗಪ್ಪ ಪಶುಪತಿಹಾಳ ಎಂಬುವವರು ದೂರು ನೀಡಿದ್ದಾರೆ. ತಾವು ಆರ್ಥಿಕ ಅಡಚಣೆಯಲ್ಲಿ ಇದ್ದಾಗ 2015-2019ರ ಅವಧಿಯಲ್ಲಿ ನಗರದ ಕುಂದಗೋಳ ಕಾಂಪ್ಲೆಕ್ಸ್‌ನಲ್ಲಿ 2 ಲಕ್ಷ ರೂ. ಸಾಲ ಪಡೆದಿದ್ದೆ. ಆಗ ಭದ್ರತೆಗಾಗಿ ಕಲಘಟಗಿ ಸೆಂಟ್ರಲ್‌ ಬ್ಯಾಂಕ್‌ನ 3 ಚೆಕ್‌ ನೀಡಲಾಗಿತ್ತು.. ಬಳಿಕ ಸಾಕ್ಷಿದಾರರ ಸಮ್ಮುಖದಲ್ಲಿ 2 ಲಕ್ಷ ರೂ. ಸಾಲ ವಾಪಸ್‌ ಮಾಡಿದ್ದೆನು. ಈ ಹಿಂದೆ ನೀಡಿದ್ದ ಚೆಕ್‌ ವಾಪಸ್‌ ಕೊಡುವಂತೆ ಕೇಳಿದಾಗ ಚೆನ್ನಪೇಟೆಯ ಸುರೇಶ ದೇವರಮನಿ ಚೆಕ್‌ ಕಳೆದುಹೋಗಿದೆ ಎಂದು ಹೇಳಿದ್ದ. ಆದರೆ, ಬಳಿಕ ನಾನು ಕೊಟ್ಟಿದ್ದ ಚೆಕ್‌ ಅನ್ನು ಜಗದೀಶ ಆರಾಧ್ಯ, ಶಿದ್ದೇಶ ಗುತ್ತೆಪ್ಪ, ಪರಶುರಾಮ ಜೋಗಿನ ಅವರಿಗೆ ನೀಡಿ ದುರುಪಯೋಗಪಡಿಸಿದ್ದಾರೆ. ಅದಲ್ಲದೆ, ಚೆಕ್‌ ಬೌನ್ಸ್‌ ಆಗಿದೆ ಎಂದು ದೂರು ದಾಖಲಿಸಿದ್ದಾರೆ ಎಂದು ನಿಂಗಪ್ಪ ಪ್ರಕರಣ ದಾಖಲಿಸಿದ್ದಾರೆ.