ಬಾಲಿವುಡ್‌ ನಟ ಅರ್ಮಾನ್ ಕೊಹ್ಲಿ ನಿವಾಸದ ಮೇಲೆ ಎನ್‌ಸಿಬಿ ದಾಳಿ

ಬಾಲಿವುಡ್‌ ನಟ ಅರ್ಮಾನ್ ಕೊಹ್ಲಿ ನಿವಾಸದ ಮೇಲೆ ಎನ್‌ಸಿಬಿ ದಾಳಿ

ಬಾಲಿವುಡ್‌ ನಟ ಅರ್ಮಾನ್ ಕೊಹ್ಲಿ ನಿವಾಸದ ಮೇಲೆ ಎನ್‌ಸಿಬಿ ದಾಳಿ

ಮುಂಬೈ: ಬಾಲಿವುಡ್‌ ನಟ ಅರ್ಮಾನ್ ಕೊಹ್ಲಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.
ಡ್ರಗ್ಸ್ ಸಂಬಂಧಿತ ಪ್ರಕರಣದಲ್ಲಿ ಅವರ ಮನೆಯ ಮೇಲೆ ಮಾದಕದ್ರವ್ಯ ನಿಯಂತ್ರಣ ಬ್ಯೂರೋ (Narcotics Control Bureau ) ಅಧಿಕಾರಿಗಳು ಶನಿವಾರ (August 28,) ಮುಂಬೈನಲ್ಲಿ ದಾಳಿ ನಡೆಸಿದರು. ಸದ್ಯ ಎನ್‌ಸಿಬಿ ಅಧಿಕಾರಿಯೊಬ್ಬರು ಪ್ರಸ್ತುತ ನಟನ ನಿವಾಸದಲ್ಲಿ ಶೋಧಗಳು ನಡೆಯುತ್ತಿವೆ ಎಂದು ದೃಢಪಡಿಸಿದರು, ಆದರೆ ಪ್ರಕರಣದ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.
2018 ರಲ್ಲಿ, ಅರ್ಮಾನ್‌ ಕೊಹ್ಲಿ ಅವರನ್ನು 41 ಬಾಟಲಿಗಳ ಸ್ಕಾಚ್ ವಿಸ್ಕಿ ಹೊಂದಿದ್ದಕ್ಕಾಗಿ ಅಬಕಾರಿ ಇಲಾಖೆ ಬಂಧಿಸಿತ್ತು. 12 ಆಲ್ಕೋಹಾಲ್ ಬಾಟಲಿಗಳನ್ನು ಮನೆಯಲ್ಲಿ ಇಡಲು ಕಾನೂನಿನಲ್ಲಿ ಅವಕಾಶವಿದೆ, ಆದರೆ ಅರ್ಮಾನ್ 41 ಬಾಟಲಿಗಳನ್ನು ಹೊಂದಿದ್ದರು ಮತ್ತು ಅವುಗಳಲ್ಲಿ ಹೆಚ್ಚಿನವು ವಿದೇಶಿ ಬ್ರಾಂಡ್‌ಗಳಾಗಿತ್ತು.
ಈ ಹಿಂದೆ ಅರ್ಮಾನ್ ತನ್ನ ಗೆಳತಿ ನೀರು ರಾಂಧವಾ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ ಪ್ರಕರಣವನ್ನು ದಾಖಲಿಸಲಾಗಿತ್ತು. ಒಂದು ವಾರಕ್ಕೂ ಹೆಚ್ಚು ಕಾಲ ತಲೆಮರೆಸಿಕೊಂಡ ನಂತರ, ಅವರನ್ನು ಅಂತಿಮವಾಗಿ ಲೋನಾವಾಲಾದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ, ನಂತರ ನೀರು ತನ್ನ ಪ್ರಕರಣವನ್ನು ಹಿಂತೆಗೆದುಕೊಂಡರು.
ಅರ್ಮಾನ್ ಕೊಹ್ಲಿ ಜಾನಿ ದುಷ್ಮನ್ ಮತ್ತು ಪ್ರೇಮ್ ರತನ್ ಧನ್ ಪಾಯೋ ಮುಂತಾದ ಹಲವಾರು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.