ವಿವಿ ಕಲಾ ಕಾಲೇಜು ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆಹ್ವಾನ

ವಿವಿ ಕಲಾ ಕಾಲೇಜು ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆಹ್ವಾನ

ತುಮಕೂರು : ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ೨೦೨೧-೨೨ನೇ ಸಾಲಿನ ಪ್ರಥಮ ಬಿಎ /ಬಿಎಸ್ ಡಬ್ಲ್ಯೂ/ ಬಿಕಾಂ / ಬಿಬಿಎ ಪದವಿ ತರಗತಿಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳು htttps://onlinetut.in/ucatut/ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬೇಕಿರುತ್ತದೆ. ಅರ್ಜಿ ಸಲ್ಲಿಸಲು ದಿನಾಂಕ: ೦೬-೦೯-೨೦೨೧ ಕೊನೆಯ ದಿನವಾಗಿರುತ್ತದೆ.

ರೂ. ೫೦ ಅರ್ಜಿ ಶುಲ್ಕವಿರುತ್ತದೆ. ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ಜನ್ಮದಿನಾAಕ ದಾಖಲೆ, ಆಧಾರ್ ಕಾರ್ಡ್, ಪಿಯುಸಿ ಅಂಕಪಟ್ಟಿ., ನಡತೆ ಪ್ರಮಾಣಪತ್ರ/ ಪ್ರಮಾಣ ಪತ್ರ, ಜಾತಿ/ಆದಾಯ ಪ್ರಮಾಣಪತ್ರಗಳನ್ನು ಪೂರಕ ದಾಖಲೆಗಳಾಗಿ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿಯನ್ನು ಇಟ್ಟುಕೊಂಡು ಪ್ರವೇಶ ಸಂದರ್ಭದಲ್ಲಿ ನಿಗದಿತ ದಾಖಲೆಗಳೊಂದಿಗೆ ಕಾಲೇಜಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಜ್ಯೇಷ್ಠತಾ ಪಟ್ಟಿಯನ್ನು ದಿನಾಂಕ: ೦೮-೦೯-೨೦೨೧ರಂದು ಕಾಲೇಜಿನಲ್ಲಿ ಹಾಗೂ ವಿಶ್ವವಿದ್ಯಾನಿಲಯದ ವೆಬ್‌ಸೈಟ್ www.tumkuruniversity.ac.in ನಲ್ಲಿ ಪ್ರಕಟಿಸಲಾಗುವುದು. ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ: ೦೯-೦೯-೨೦೨೧ ಕೊನೆಯ ದಿನವಾಗಿರುತ್ತದೆ.

ದಿನಾಂಕ: ೧೧-೦೯-೨೦೨೧ರಂದು ಅಂತಿಮ ಜ್ಯೇಷ್ಠತಾ ಪಟ್ಟಿ ಮತ್ತು ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು. ದಿನಾಂಕ: ೧೩-೦೯-೨೦೨೧ರಿಂದ ೧೫-೦೯-೨೦೨೧ರವರೆಗೆ ಬಿಎ /ಬಿಎಸ್ ಡಬ್ಲ್ಯೂ/ ಬಿಕಾಂ / ಬಿಬಿಎ ಕೋರ್ಸುಗಳಿಗೆ ಆಯ್ಕೆ ಪಟ್ಟಿಯಂತೆ ಪ್ರವೇಶ ನೀಡಲಾಗುವುದು. ದಿನಾಂಕ: ೧೬-೦೯-೨೦೨೧ರಿಂದ ೧೮-೦೯-೨೦೨೧ರವರೆಗೆ ಬಿಕಾಂ/ಬಿಬಿಎ ಕೋರ್ಸುಗಳಿಗೆ ಆಯ್ಕೆ ಪಟ್ಟಿಯಂತೆ ಪ್ರವೇಶ ನೀಡಲಾಗುವುದು. ಉಳಿದ ಸೀಟುಗಳಿಗೆ ದಿನಾಂಕ: ೨೦-೦೯-೨೦೨೧ರಿಂದ ೨೨-೦೯-೨೦೨೧ರವರೆಗೆ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಹೆಚ್ಚಿನ ಮಾಹಿತಿಗಳಿಗೆ ತುಮಕೂರು ವಿಶ್ವವಿದ್ಯಾನಿಲಯದ ವೆಬ್‌ಸೈಟ್ ಅನ್ನು ವೀಕ್ಷಿಸಲು ಕೋರಿದೆ.