ಶ್ರೀಗಂಧದ ಮರ ಕಳವು: ಅಧಿಕಾರಿಗಳ ಗುಂಡೇಟಿಗೆ ಒಬ್ಬ ಸಾವು

ಶ್ರೀಗಂಧದ ಮರ ಕಳವು: ಅಧಿಕಾರಿಗಳ ಗುಂಡೇಟಿಗೆ ಒಬ್ಬ ಸಾವು

ತುಮಕೂರು: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರ ಕಡಿಯುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳು ಹಾರಿಸಿದ ಗುಂಡಿಗೆ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಅರಣ್ಯ ಪ್ರದೇಶ ವ್ಯಾಪ್ತಿಯ ಕೆಂಕೆರೆ ಮೀಸಲು ಅರಣ್ಯದಲ್ಲಿ ಈ ಘಟನೆ ಭಾನುವಾರ ನಡೆದಿದೆ. ಗುಂಡೇಟಿಗೆ ಬಲಿಯಾದವನ ಗುರುತು ಇನ್ನೂ ಪತ್ತೆಯಾಗಿಲ್ಲ. ವ್ಯಕ್ತಿಯ ವಯಸ್ಸು 30-35 ಆಸುಪಾಸಿನದ್ದಾಗಿದ್ದು, ಕೈಮೇಲೆ ಕನ್ನಡದಲ್ಲಿ ಈಶ್ವರ ಎಂಬ ಅಚ್ಚೆ ಇರುವುದು ಕಂಡು ಬಂದಿದೆ. ಗುಂಡೇಟಿಗೆ ಬಲಿಯಾದವನು ಸೇರಿದಂತೆ ನಾಲ್ವರು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದರು ಎನ್ನಲಾಗಿದೆ. ಇದೀಗ ಮೂವರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.