ತುಮಕೂರು: ಮನೆ‌ ಬಳಿಯ ಕಟ್ಟೆಗೆ ಕಾಲು ಜಾರಿ ಬಿದ್ದು ಪುಟಾಣಿ ಅಕ್ಕ-ತಂಗಿಯರ ದಾರುಣ ಸಾವು

ತುಮಕೂರು: ಮನೆ‌ ಬಳಿಯ ಕಟ್ಟೆಗೆ ಕಾಲು ಜಾರಿ ಬಿದ್ದು ಪುಟಾಣಿ ಅಕ್ಕ-ತಂಗಿಯರ ದಾರುಣ ಸಾವು
ಮಕ್ಕಳನ್ನು ಕಾಪಾಡಲು ತಾಯಿ ಮಂಜುಳಾ ಕೂಡ ಹಾರಿದ್ದಾರೆ. ಮೂವರು ಬಿದ್ದದ್ದನ್ನು ಕಂಡು ಕೂಡಲೇ ಕಟ್ಟೆಗೆ ಊರಿನ ಕೆಲ ವ್ಯಕ್ತಿಗಳು ಹಾರಿದ್ದಾರೆ. ಆದರೆ ತಾಯಿ ಬಚಾವ್ ಆಗಿದ್ದು, ದುರಾದೃಷ್ಟವಶಾತ್ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ.

ತುಮಕೂರು: ಪುಟಾಣಿ ಅಕ್ಕ- ತಂಗಿಯರು ಮನೆ ಬಳಿಯ ಕಟ್ಟೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ (Death) ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಬಳಿಯ ವರಣಸಂದ್ರದಲ್ಲಿ ನಡೆದಿದೆ.

ಕವನ (7), ಯೋಕ್ಷಿತಾ (3) ಮೃತ ಅಕ್ಕ ತಂಗಿಯರು. ತಾಯಿ ಮಂಜುಳಾ ಕಟ್ಟೆಯಲ್ಲಿ ಬಟ್ಟೆ ತೊಳೆಯುವ ವೇಳೆ ಸ್ಥಳಕ್ಕೆ ಹೋಗಿದ್ದ ಕವನ, ಯೋಕ್ಷಿತಾ ಆಟವಾಡುತ್ತಿದ್ದರು. ಈ ವೇಳೆ ಕಾಲು ಜಾರಿ ಕಟ್ಟೆಯೊಳಗೆ ಮಕ್ಕಳು ಬಿದ್ದಿದ್ದಾರೆ. ಮಕ್ಕಳನ್ನು (Children) ಕಾಪಾಡಲು ತಾಯಿ (Mother) ಮಂಜುಳಾ ಕೂಡ ಹಾರಿದ್ದಾರೆ. ಮೂವರು ಬಿದ್ದದ್ದನ್ನು ಕಂಡು ಕೂಡಲೇ ಕಟ್ಟೆಗೆ ಊರಿನ ಕೆಲ ವ್ಯಕ್ತಿಗಳು ಹಾರಿದ್ದಾರೆ. ಆದರೆ ತಾಯಿ ಬಚಾವ್ ಆಗಿದ್ದು, ದುರಾದೃಷ್ಟವಶಾತ್ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ.

ನಿನ್ನೆ (ನವೆಂಬರ್ 18) ಸಂಜೆ 5 ಗಂಟೆಗೆ ಈ ಘಟನೆ ನಡೆದಿದ್ದು, ಮಕ್ಕಳನ್ನು ಕಳೆದುಕೊಂಡು ಪೋಷಕರು‌ ರೋಧಿಸುತ್ತಿದ್ದಾರೆ. ಸದ್ಯ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.