ಎಂ ಇ ಎಸ್ ಮುಖಂಡರಿಗೆ ಕನ್ನಡ ಸಂಘಟನೆಗಳಿಂದ ಕಪ್ಪು ಮಸಿ |Belagavi|

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಶೇಷ ಅಧಿವೇಶನ ವಿರೋಧಿಸಿ ಎಂಇಎಸ್ ಕಾರ್ಯಕರ್ತರು ಮಹಾಮೇಳವನ್ನ ಆಯೋಜಿಸಿ ಉದ್ಧಟತನ ಮೆರೆದಿದ್ದರು. ಅಷ್ಟೇ ಅಲ್ಲ ಬೆಳಗಾವಿ ಪಾಲಿಕೆ ಸಿಬ್ಬಂದಿಗೆ ಎಂಇಎಸ್ನ ಕೆಲವು ಪುಂಡರು ಆವಾಜ್ ಹಾಕಿದ್ದಾರೆ ಅನ್ನೋ ಆರೋಪ ಕೇಳಿಬಂದಿರುವ ಹಿನ್ನಲೆಯಲ್ಲಿ ಕರ್ನಾಟಕ ನವ ನಿರ್ಮಾಣ ಪಡೆಯ ಕಾರ್ಯಕರ್ತರು ಇಂದು ಎಂಇಎಸ್ ಮುಖಂಡರಿಗೆ ಮಸಿ ಬಳಿದಿದ್ದಾರೆ.ಪ್ರತಿ ವರ್ಷದಂತೆ ಬೆಳಗಾವಿ ಅಧಿವೇಶನ ವೇಳೆ ಎಂಇಎಸ್ ಪುಂಡರ ಕಿರಿಕ್ ಇದ್ದೆ ಇರುತ್ತೆ. ಈ ನಿಟ್ಟಿನಲ್ಲಿ ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿ ಎಂಇಎಸ್ ಕಾರ್ಯಕರ್ತರು ಹಾಗೂ ಕರ್ನಾಟಕ ನವ ನಿರ್ಮಾಣ ಪಡೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಆಕ್ರೋಶಗೊಂಡ ಕರ್ನಾಟಕ ನವ ನಿರ್ಮಾಣ ಪಡೆಯ ಕಾರ್ಯಕರ್ತರು, ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿವೇಶನ ವಿರೋಧಿಸಿ ಎಂಇಎಸ್ ಕಾರ್ಯಕರ್ತರು ಅನಧಿಕೃತವಾಗಿ ವೇದಿಕೆ ನಿರ್ಮಾಣ ಮಾಡಿದ್ದರು. ಇದನ್ನ ಪಾಲಿಕೆ ಸಿಬ್ಬಂದಿ ತೆರವು ಮಾಡಲು ಮುಂದೆ ಬಂದಾಗ ಧಮಕಿ ಹಾಕಿದ್ದಾರೆ ಎನ್ನಲಾಗಿದೆ.ಸದ್ಯ ಅಲ್ಲಿನ ಪರಿಸ್ಥಿತಿ ಕೊಂಚ ತಿಳಿ ಗೊಂಡಿದೆ. ಪೊಲೀಸ್ ಅಧಿಕಾರಿಗಳು ಈ ಘಟನೆ ಕುರಿತು ಕೆಲವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಮಸಿ ಬಳಿಯುತ್ತಿದ್ದಂತೆ ಎಂಇಎಸ್ ಮುಖಂಡರು ನಾಳೆ ಬೆಳಗಾವಿ ಬಂದ್ಗೆ ಕರೆ ನೀಡಿದ್ದಾರೆ. ಎಂಇಎಸ್ ನ ಮಾಜಿ ಶಾಸಕ ಮನೋಹರ್ ಕಿಣೇಕರ್ ಬಂದ್ಗೆ ಕರೆ ನೀಡಿದ್ದಾರೆ. ಮಸಿ ಬಳಿದಿರುವ ಘಟನೆಯ ಬಗ್ಗೆ ಮಹಾರಾಷ್ಟ್ರ ನಾಯಕರ ಗಮನಕ್ಕೆ ತರುತ್ತೇವೆ. ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ನಾಯಕರ ಗಮನಕ್ಕೂ ತರುತ್ತೇವೆ. ಅಲ್ಲದೇ ನಾಳಿನ ಬಂದ್ ಯಶಸ್ವಿಯಾಗುವಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು ಅಂತಾ ಕರೆ ನೀಡಿದ್ದಾರೆ.