ಕಾಂತಾರʼದ ಮೂಲಕ ಬಿಗ್‌ ಬಜೆಟ್‌ ಸಿನಿಮಾದವರಿಗೆ ಪಾಠ ಕಲಿಸಿದ್ದಕ್ಕೆ ಥ್ಯಾಂಕ್ಸ್‌ ರಿಷಬ್‌..!

ಕಾಂತಾರʼದ ಮೂಲಕ ಬಿಗ್‌ ಬಜೆಟ್‌ ಸಿನಿಮಾದವರಿಗೆ ಪಾಠ ಕಲಿಸಿದ್ದಕ್ಕೆ ಥ್ಯಾಂಕ್ಸ್‌ ರಿಷಬ್‌..!

ಬೆಂಗಳೂರು : ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ ಅವರು ಕಾಂತಾರ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಕಾಂತಾರ ಕ್ರೇಜ್‌ ಬಗ್ಗೆ ಮಾತೆತ್ತಿರುವ ಆರ್‌ಜಿವಿ ಸದ್ಯ ಬಿಗ್‌ ಬಜೆಟ್‌ ಸಿನಿಮಾಗಳಿಗೆ ತಕ್ಕ ಪಾಠ ಕಲಿಸಿದ್ದಕ್ಕೆ ರಿಷಬ್‌ ಥ್ಯಾಂಕ್ಸ್‌, ಎಲ್ಲರೂ ನಿಮಗೆ ಫೀಸ್‌ ಕಟ್ಟಬೇಕು ಅಂತ ಹೇಳಿದ್ದಾರೆ.

ಹೌದು, ಆರ್‌ಜಿವಿಗೆ ಕಾಂತಾರ ಸಖತ್‌ ಇಷ್ಟವಾದಂತೆ ಕಾಣುತ್ತಿದೆ. ಕಾಂತಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಧ್ಯ ರಾಮ್‌ ಗೋಪಾಲ್‌ ವರ್ಮಾ ಕಾಂತಾರ ಕುರಿತು ಟ್ಟೀಟ್‌ ಮಾಡಿ, ಹೇ ರಿಷಬ್‌ ಸಿನಿಮಾ ರಂಗಕ್ಕೆ ಕಾಂತಾರ ಎಂಬ ಅದ್ಭುತ ಪಾಠವನ್ನು ಹೇಳಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಚಿತ್ರರಂಗದ ಎಲ್ಲರೂ ನಿಮಗೆ ಬೋಧಾನಾ ಶುಲ್ಕ ಕಟ್ಟಬೇಕಾಗುತ್ತದೆ . ನಿಮ್ಮ ಸಿನಿಮಾ ಮೂಲಕ ಶಿವನು ಗುಳಿಗ ದೈವದಿಂದ ಹೇಗೆ ಎಚ್ಚರಗೊಳ್ಳುತ್ತಾನೋ ಹಾಗೆ ಎಲ್ಲಾ ದೊಡ್ಡ ಬಜೆಟ್‌ ಸಿನಿಮಾ ತಯಾರಕರು ನಡುರಾತ್ರಿ ಹಠಾತ್ತನೆ ಎಚ್ಚರಗೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಂತಾರ ಬಿಡುಗಡೆ ಸಮಯದಿಂದಲೇ ಆರ್‌ಜಿವಿ ಹಲವಾರು ಟ್ಟೀಟ್‌ಗಳನ್ನು ಮಾಡಿದ್ದಾರೆ. ಇನ್ನು ಇಂದು ಮಾಡಿರುವ ಅವರ ಟ್ವೀಟ್‌ಗೆ ಪರ ಮತ್ತು ವಿರೋಧ ವ್ಯಕ್ತವಾಗುತ್ತಿದೆ. ಸಿನಿಮಾ ವಿಚಾರಕ್ಕೆ ಬರುವುದಾರೆ ಈಗಾಗಲೇ ಕಾಂತಾರ ಟಾಲಿವುಡ್‌ನಲ್ಲಿ ಅಬ್ಬರಿಸುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಗಾಡ್‌ ಫಾದರ್‌ ಸಿನಿಮಾಗೂ ಕೂಡ ಕಾಂತಾರದ ಬಿಸಿ ತಾಗುತ್ತಿದೆ. ಹಿಂದಿ, ತಮಿಳು, ಮಲಯಾಳಂ ಭಾಷೆಯಲ್ಲಿಯೂ ಸಹ ರಿಷಬ್‌ ಶೆಟ್ಟಿ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.