ಕೊರೊನಾ ಪರಿಹಾರ ನಿಧಿಗೆ 30 ಲಕ್ಷ ದೇಣಿಗೆ ನೀಡಿದ ತಮಿಳು ನಟ ಚೇರನ್ ವಿಕ್ರಮ್

ಚೆನ್ನೈ, ಮೇ 17- ತಮಿಳುನಾಡಿನಲ್ಲಿ ಕೊರೊನಾ 2 ಅಲೆಯಿಂದ ತತ್ತರಿಸಿರುವ ಜನರ ನೆರವಿಗಾಗಿ ಚಿತ್ರ ರಂಗದವರು ನೆರವು ನೀಡುತ್ತಿದ್ದು ಇಂದು ನಟ ಚೇರನ್ ವಿಕ್ರಮ್ ಅವರು ಸಿಎಂ ಪರಿಹಾರ ನಿಧಿಗೆ 30 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಇಂದು ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿ ಮಾಡಿ 50 ಲಕ್ಷ ದೇಣಿಗೆ ನೀಡಿದ್ದಾರೆ. ಇದಕ್ಕೂ ಮುಂಚೆ ರಜನಿ ಕಾಂತ್ ರ ಪುತ್ರಿ ಸೌಂದರ್ಯ ಕೂಡ 1 ಕೋಟಿ ದೇಣಿಗೆ ನೀಡಿದರೆ, ಅಜಿತ್, ಸೂರ್ಯ, ಕಾರ್ತಿ, ಶಿವಕುಮಾರ್, ವೆಟ್ರಿಮಾರನ್, ನಿರ್ದೇಶಕರಾದ ಎ.ಆರ್.ಮುರುಗದಾಸ್, ಶಂಕರ್ ಮುಂತಾದ ವರು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಚೇರನ್ ವಿಕ್ರಮ್ ಅವರು ಆನ್ ಲೈನ್ ಮೂಲಕ 30 ಲಕ್ಷ ದೇಣಿಗೆ ನೀಡಿದ್ದಾರೆ. ವಿಕ್ರಮ್ ಅವರು ಸದ್ಯ ಆರ್.ಅಜಯ್ ಜ್ಞಾನ ಮುತ್ತು ನಿರ್ದೇಶನದ ಕೋಬ್ರಾ, ಮಣಿರತ್ನಂ ನಿರ್ದೇಶನದ ಚಿತ್ರ ವೊಂದರಲ್ಲಿ ನಟಿಸುತ್ತಿದ್ದು, ಐಶ್ವರ್ಯ ರೈ, ಜಯಂರವಿ, ತ್ರಿಷಾ ಮುಂತಾದ ವರು ನಟಿಸುತ್ತಿದ್ದರೆ, ಕಾರ್ತಿಕ್ ಸುಬ್ಬರಾಜು ಅವರ ನಿರ್ದೇಶನದ ಚಿತ್ರ ವೊಂದರಲ್ಲಿ ವಿಕ್ರಮ್ ನಟಿಸುತ್ತಿದ್ದಾರೆ.

ಕೊರೊನಾ ಪರಿಹಾರ ನಿಧಿಗೆ 30 ಲಕ್ಷ ದೇಣಿಗೆ ನೀಡಿದ ತಮಿಳು ನಟ ಚೇರನ್ ವಿಕ್ರಮ್