ರಾಜ್ಯದ ಸಾಹಿತಿ,ಕಲಾವಿದರಿಗೆ ಗುಡ್ ನ್ಯೂಸ್ : ಮಸಾಶನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾಹಿತಿ/ಕಲಾವಿದ/ವಿಧವೆಯರಿಗೆ ಸಿಹಿ ಸುದ್ದಿ ಸಿಕ್ಕಿದ್ದು ಮಸಾಶನ ಬಿಡುಗಡೆಗೆ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿರುವ ಆದೇಶದಲ್ಲಿ, ಸಾಹಿತಿ ಮತ್ತು ಕಲಾವಿದರ ಮಸಾಶನ ಯೋಜನೆಗೆ ಮೊದಲನೇ ಮತ್ತು ಎರಡನೇ ಕಂತಿನ ಅನುದಾನ ಒಟ್ಟು 1250.00 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿ ಆದೇಶಹೊರಡಿಸಿದೆ.
2021 ನೇ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಿಗೆ ಮಾಸಾಶನ/ವಿಧವಾಮಾಸಾಶನ ಪಾವತಿಗೆ ಒಟ್ಟಾರೆ ರೂ.684.33 ಲಕ್ಷಗಳು ಬೇಕಾಗಿರುತ್ತದೆ. ಎರಡನೇ ಕಂತಿನಲ್ಲಿ ಬಿಡುಗಡೆಯಾದ ಅನುದಾನದಲ್ಲಿ 109.45 ಲಕ್ಷಗಳು ಉಳಿಕೆ ಇರುತ್ತದೆ. ಆದ್ದರಿಂದ ಮೂರನೇ ಕಂತಿನಲ್ಲಿ 625.00 ಲಕ್ಷಗಳನ್ನು ಬಿಡುಗಡೆ ಮಾಡಿದಲ್ಲಿ ಎರಡನೇ ಕಂತಿನ ಉಳಿಕೆ ಅನುದಾನವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.