ಕೋವಿ ಶೀಲ್ಡ್ ಲಸಿಕೆಯಲ್ಲೂ ಬಂತು ನಕಲಿ ; ಪತ್ತೆ ಹಚ್ಚಿದ ವಿಶ್ವಸಂಸ್ಥೆ ಅಧಿಕಾರಿಗಳು
ಕೋವಿ ಶೀಲ್ಡ್ ಲಸಿಕೆಯಲ್ಲೂ ಬಂತು ನಕಲಿ ; ಪತ್ತೆ ಹಚ್ಚಿದ ವಿಶ್ವಸಂಸ್ಥೆ ಅಧಿಕಾರಿಗಳು
ನವದೆಹಲಿ: ಭಾರತದ ಲಸಿಕೆ 'ಕೋವಿಶೀಲ್ಡ್'ನ ನಕಲಿ ಡೋಸೇಜ್ಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಪತ್ತೆ ಹಚ್ಚಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ನಡುವೆ ಕೋವಿಶೀಲ್ಡ್ ಲಸಿಕೆ ಡೋಸ್‌ಗಳನ್ನು ಭಾರತ ಮತ್ತು ಆಫ್ರಿಕಾದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಲಸಿಕೆ ತಯಾರಕಾ ಸಂಸ್ಥೆ ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ, ವಶಪಡಿಸಿಕೊಂಡ ಲಸಿಕೆಗಳನ್ನು ನಕಲಿ ಎಂದು ದೃಢಪಡಿಸಿದೆ. ನಕಲಿ ಲಸಿಕೆಗಳು ಜಾಗತಿಕವಾಗಿ ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.ಕೋವಿಶೀಲ್ಡ್ ಅಸ್ಟ್ರಾಜೆನೆಕಾ ಜಬ್‌ನ ಭಾರತೀಯ ನಿರ್ಮಿತ ಆವೃತ್ತಿಯಾಗಿದ್ದು, ಇದುವರೆಗೆ ಭಾರತದಲ್ಲಿ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಲಸಿಕೆಯಾಗಿದೆ. ಇದುವರೆಗೆ 486 ದಶಲಕ್ಷ ಡೋಸ್‌ಗಳನ್ನು ನೀಡಲಾಗಿದೆ. ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ದೇಶಗಳಿಗೆ ಸೀರಮ್ ಲಕ್ಷಾಂತರ ಕೋವಿಶೀಲ್ಡ್ ಲಸಿಕೆಗಳನ್ನು ಪೂರೈಸಿದೆ. ಅಲ್ಲದೇ ಕೋವಾಕ್ಸ್ ಯೋಜನೆಯಡಿ ಸಂಸ್ಥೆ ಬಡ ರಾಷ್ಟ್ರಗಳಿಗೂ ವ್ಯಾಕ್ಸಿನ್ ಪೂರೈಸುತ್ತಿದೆ.