ಓಟಿಟಿಗೆ ಬಂತು ಶಿವರಾಜ್‌ಕುಮಾರ್ ನಟನೆಯ 'ಭಜರಂಗಿ 2'; ಯಾವಾಗ ಪ್ರಸಾರ?

'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್, ಭಾವನಾ ಮೆನನ್‌, ಶ್ರುತಿ ಮುಂತಾದವರು ನಟಿಸಿರುವ 'ಭಜರಂಗಿ 2' ಸಿನಿಮಾವು ಅಕ್ಟೋಬರ್ 29ರಂದು ತೆರೆಕಂಡಿತ್ತು. ಇದೀಗ ಆ ಸಿನಿಮಾವು ಓಟಿಟಿಗೆ ಎಂಟ್ರಿ ಕೊಟ್ಟಿದೆ.

ಓಟಿಟಿಗೆ ಬಂತು ಶಿವರಾಜ್‌ಕುಮಾರ್ ನಟನೆಯ 'ಭಜರಂಗಿ 2'; ಯಾವಾಗ ಪ್ರಸಾರ?
ಶಿವರಾಜ್‌ಕುಮಾರ್, ಭಾವನಾ ಮೆನನ್‌ ಅಭಿನಯದ '' ಸಿನಿಮಾವು ಅಕ್ಟೋಬರ್ 29ರಂದು ತೆರೆಗೆ ಬಂದಿತ್ತು. ನಿರ್ದೇಶಕ ಎ. ಹರ್ಷ ನಿರ್ದೇಶನದಲ್ಲಿ ಶಿವಣ್ಣ ನಟಿಸಿದ್ದ ಮೂರನೇ ಸಿನಿಮಾ ಇದಾಗಿತ್ತು. 'ಭಜರಂಗಿ', 'ವಜ್ರಕಾಯ' ನಂತರ ಶಿವರಾಜ್‌ಕುಮಾರ್-ಹರ್ಷ ಈ ಸಿನಿಮಾಗಾಗಿ ಕೈ ಜೋಡಿಸಿದ್ದರು. ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದ್ದ ಈ ಸಿನಿಮಾ ಈಗ ಓಟಿಟಿಗೆ ಎಂಟ್ರಿ ಕೊಟ್ಟಿದ್ದೆ. ಜೀ5ನಲ್ಲಿ 'ಭಜರಂಗಿ 2' ಪ್ರದರ್ಶನ ಕಾಣಲಿದೆ. ಡಿ.23ಕ್ಕೆ ರಿಲೀಸ್ ಹಾಗೂ ಎ. ಹರ್ಷ ಕಾಂಬಿನೇಷನ್ 'ಭಜರಂಗಿ 2' ಸಿನಿಮಾವು ಬೆಳ್ಳಿಪರದೆಯ ಮೇಲೆ ಮ್ಯಾಜಿಕ್ ಮಾಡಿತ್ತು. ಶಿವಣ್ಣನ ನಟನೆ, ಹರ್ಷ ಡೈರೆಕ್ಷನ್‌ಗೆ ಪ್ರೇಕ್ಷಕರು ಸಖತ್ ರೆಸ್ಪಾನ್ಸ್ ಕೊಟ್ಟಿದ್ದರು ಗಲ್ಲಾ ಪೆಟ್ಟಿಗೆಯಲ್ಲೂ ಸದ್ದು ಮಾಡಿದ್ದ 'ಭಜರಂಗಿ 2' ಈಗ ಜೀ5ನಲ್ಲಿ ಡಿಸೆಂಬರ್ 23ರಂದು ರಿಲೀಸ್ ಆಗಲಿದೆ. ಚಿತ್ರಮಂದಿರದಲ್ಲಿ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ಓಟಿಟಿಯಲ್ಲಿ ನೋಡಿ ಆನಂದಿಸಬಹುದಾಗಿದೆ. 'ಭಜರಂಗಿ 2' ಬಿಡುಗಡೆಯಂತೆ ಅಪ್ಪು ನಿಧನ 'ಭಜರಂಗಿ 2' ಸಿನಿಮಾವು ಅಕ್ಟೋಬರ್ 29ರಂದು ತೆರೆಕಂಡಿತ್ತು. ಅಂದು ಮುಂಜಾನೆ 5ಗಂಟೆಗೆ ಸಿನಿಮಾ ಶೋ ಆರಂಭವಾಗಿ, 6 ಗಂಟೆಗೆಲ್ಲ ಶಿವರಾಜ್‌ಕುಮಾರ್ ಬೆಂಗಳೂರಿನ ಕೆಲ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದರು. ಫ್ಯಾನ್ಸ್ ಶೋ ಮುಗಿದು, ಮಾರ್ನಿಂಗ್ ಶೋಗಳು ಆರಂಭವಾಗಿದ್ದವು. ಆ ವೇಳೆ ಬರಸಿಡಿಲಿನಂತೆ ಪುನೀತ್ ರಾಜ್‌ಕುಮಾರ್ ಅವರ ನಿಧನದ ಸುದ್ದಿ ಅಪ್ಪಳಿಸಿತ್ತು. ಕರುನಾಡಿನ ತುಂಬ ನೋವು ಮನೆ ಮಾಡಿತು. ಫ್ಯಾನ್ಸ್ ಜೊತೆ ಸಿನಿಮಾ ವೀಕ್ಷಿಸಿದ್ದ ಶಿವಣ್ಣ ಸಿನಿಮಾ ತೆರೆಕಂಡು 15 ದಿನಗಳ ಬಳಿಕ ಶಿವಣ್ಣ ಫ್ಯಾನ್ಸ್ ಜೊತೆಗೆ ಸಿನಿಮಾ ವೀಕ್ಷಣೆ ಮಾಡಿದ್ದರು. ನಂತರ ಮಾತನಾಡಿದ್ದ ಅವರು, 'ಮನುಷ್ಯ ಹೋದಕೂಡಲೇ ಬಿಡೋದಲ್ಲ. ಅವರನ್ನು ಮನಸ್ಸಲ್ಲಿ ಇಟ್ಟುಕೊಳ್ಳಬೇಕು. ಅಪ್ಪು ಹೋಗಿಲ್ಲ, ಎಲ್ಲರ ಮನಸ್ಸಲ್ಲಿ ಇದ್ದಾನೆ. ಅಪ್ಪುಗೆ 'ಭಜರಂಗಿ 2' ಸಿನಿಮಾ ನೋಡಬೇಕು ಅಂತ ತುಂಬ ಆಸೆ ಇತ್ತು. ಅಕ್ಟೋಬರ್ 29ರಂದು ಮನೆಯಲ್ಲೇ ಸಿನಿಮಾ ನೋಡಬೇಕು ಅಂತ ಅಪ್ಲೋಡ್ ಕೂಡ ಮಾಡಿಸಿಕೊಂಡಿದ್ದ. ಇವತ್ತು ಅವನ ಅಭಿಮಾನಿಗಳು ಸಿನಿಮಾ ನೋಡ್ತಾ ಇದ್ದಾರೆ. ಅವರು ನೋಡಿದರೆ ಅಪ್ಪು ನೋಡಿದಂತೆಯೇ ಲೆಕ್ಕ. ಯಾಕೆಂದರೆ, ಅಭಿಮಾನಿಗಳ ಮನಸ್ಸಲ್ಲಿ ಆಳವಾಗಿ ಅಪ್ಪು ಬೇರೂರಿದ್ದಾನೆ' ಎಂದು ಹೇಳಿದ್ದರು. ಈ ಸಿನಿಮಾದಲ್ಲಿ ಶಿವಣ್ಣ, ಭಾವನಾ ಮೆನನ್ ಜೊತೆಗೆ ಶ್ರುತಿ, ಶಿವರಾಜ್ ಕೆ.ಆರ್. ಪೇಟೆ, ಭಜರಂಗಿ ಲೋಕಿ ಮುಂತಾದವರ ನಟಿಸಿದ್ದ 'ಭಜರಂಗಿ 2' ಚಿತ್ರವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸಿದ್ದರು. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.