ಸಿಎಂ ದೆಹಲಿಯಾತ್ರೆಯಿಂದ ನಯಾಪೈಸೆ ಪ್ರಯೋಜನವಾಗಿಲ್ಲ : ಕಾಂಗ್ರೆಸ್ ವ್ಯಂಗ್ಯ

ಸಿಎಂ ದೆಹಲಿಯಾತ್ರೆಯಿಂದ ನಯಾಪೈಸೆ ಪ್ರಯೋಜನವಾಗಿಲ್ಲ : ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ನಾಲ್ಕು ಬಾರಿ ದೆಹಲಿಯಾತ್ರೆ ಕೈಗೊಂಡರೂ ನಯಾಪೈಸೆ ಪ್ರಯೋಜನವಾಗಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಸರ್ಕಾರದ ಕಾಳೆಲೆದಿದೆ. 'ನಾಯಕತ್ವ ಬದಲಾದರೂ, ಸಿಎಂ ಬದಲಾದರೂ ಕರ್ನಾಟಕದೆಡೆಗಿನ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮಾತ್ರ ಬದಲಾಗದು. ನೂತನ ಸಿಎಂ ಕೆಲವೇ ದಿನಗಳಲ್ಲಿ ನಾಲ್ಕು ಬಾರಿ ದೆಹಲಿಗೆ ಹೋಗಿಬಂದರೂ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲದಾಗಿದೆ. GST ಬಾಕಿ ಕೊಡಲಿಲ್ಲ, ಲಸಿಕೆ ಕೊರತೆ ನೀಗಲಿಲ್ಲ, ನೆರೆ ಪರಿಹಾರವೂ ಇಲ್ಲ, ನರೇಗಾ ಕೂಲಿ ಬಾಕಿಯೂ ಬರಲಿಲ್ಲ' ಎಂದು ಕಿಡಿಕಾರಿದೆ.

ಇನ್ನು 'ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಮೂರು ವಾರಗಳ ಕಾಲ ಸಂಭ್ರಮಾಚರಣೆ ಮಾಡಲು ಬಿಜೆಪಿ ಮುಂದಾಗಿದೆ. ಯಾವ ಸಾಧನೆಗಾಗಿ ಈ ಸಂಭ್ರಮ? ಕಳಪೆ ಕರೋನಾ ನಿರ್ವಹಣೆಯಿಂದ ಜನರನ್ನು ಕೊಂದಿದ್ದಕ್ಕಾ? ಆಕ್ಸಿಜನ್ ನೀಡದೆ ನರಳಿಸಿದ್ದಕ್ಕಾ? ನಿರುದ್ಯೋಗ ಸೃಷ್ಟಿಸಿದ್ದಕ್ಕಾ? ಬೆಲೆ ಏರಿಕೆಯಿಂದ ಜನರನ್ನು ಹಿಂಸಿಸುತ್ತಿರುವುದಕ್ಕಾ? ಆರ್ಥಿಕತೆ ಕುಸಿದಿದ್ದಕ್ಕಾ?'