ಗಾಯನ ಮೂಲಕ ದಿವಂಗತ ಪುನೀತ್ರಿಗೆ ಶ್ರದ್ಧಾಂಜಲಿ

ಮುಗಳಿ ಗ್ರಾಮದ ಕಲಾವಿದರು ಗೀತ ಗಾಯನ ಮೂಲಕ ಚಿತ್ರನಟ ಪುನೀತ್ ರಾಜಕುಮಾರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಭಜನೆ, ತತ್ವಪದ ಹಾಗೂ ಜಾನಪದ ಹಾಡುಗಳನ್ನು ಹಾಡುತ್ತಾ ಶಿಗ್ಗಾಂವಿ ಪಟ್ಟಣದಲ್ಲಿ ಮೇಣದ ಬತ್ತಿ ಹಿಡಿದು ಪ್ರಮುಖ ಬೀದಿಯಲ್ಲಿ ಸಂಚರಿಸಿ ಯುವಕರು ಮಹಿಳೆಯರು ಮೆರವಣಿಗೆ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು. ಶಂಭುಲಿಂಗಪ್ಪ ಭದ್ರಶೆಟ್ಟಿ, ಈರನಗೌಡ ಪಾಟೀಲ್, ಗುರಪ್ಪ ಹುಬ್ಬಳ್ಳಿ, ಬಸವರಾಜ ಗೊಬ್ಬಿ, ಶೇಖಣ್ಣ ಗೊಬ್ಬಿ, ತಿರಕಪ್ಪ ಅರಳಿಕಟ್ಟಿ, ಸಂಜೀವ ಬಿಶೆಟ್ಟಿ, ಬಸಪ್ಪ ಸಕ್ರಿ, ರಾಮಣ್ಣ ಹರಕುಣಿ, ಈರಪ್ಪ ಭದ್ರಶೆಟ್ಟಿ ಉಪಸ್ಥಿತರಿದ್ದರು.