ಕರ್ನಾಟಕ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆ: ಬಿಜೆಪಿಗಿಂತಲೂ ಕಾಂಗ್ರೆಸ್ ಕಡೆಗೆ ಹೆಚ್ಚಿನ ಮತದಾರರ ಒಲವು

ಕರ್ನಾಟಕ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆ: ಬಿಜೆಪಿಗಿಂತಲೂ ಕಾಂಗ್ರೆಸ್ ಕಡೆಗೆ ಹೆಚ್ಚಿನ ಮತದಾರರ ಒಲವು

ಬೆಂಗಳೂರು: ಹೈದರಾಬಾದ್ ಮೂಲದ ಎಸ್‍ಎಎಸ್‍ ಗ್ರೂಪ್ IPSS ನೊಂದಿಗೆ ಬಹುನಿರೀಕ್ಷಿತ 2023ರ ಕರ್ನಾಟಕ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಆಡಳಿತಾರೂಢ ಬಿಜೆಪಿಗಿಂತಲೂ ಮತದಾರರ ಚಿತ್ರ ಕಾಂಗ್ರೆಸ್‍ನತ್ತ ಹೆಚ್ಚಿರುವುದು ಕಂಡುಬಂದಿದೆ.

ಮುಂಬರುವ ಚುನಾವಣೆಯಲ್ಲಿ ರಾಜ್ಯದ ಪ್ರಮುಖ ಪಕ್ಷಗಳ ಪೈಕಿ ಮತದಾರರ ಒಲವು ಯಾರ ಕಡೆ ಹೆಚ್ಚಿದೆ ಎಂಬುದರ ಬಗ್ಗೆ ಸ್ಯಾಂಪಲ್ ಸಂಗ್ರಹಿಸಲಾಗಿದೆ.

ಯಾವುದೇ ಡಿಜಿಟಲ್ ಅಥವಾಳನ್ನು ಸಂಗ್ರಹಿಸದೆ ನೇರವಾಗಿ ಮತದಾರರ ಬಳಿಯೇ ತೆರಳಿ ಅವರ ಅಭಿಪ್ರಾಯ ಪಡೆಯಲಾಗಿದೆ. ವಿವಿಧ ಸಮುದಾಯಗಳಿಗೆ ಸೇರಿದ ಮತದಾರರೊಂದಿಗೆ ನೇರವಾಗಿ ಮಾತನಾಡಿ ಅಭಿಪ್ರಾಯ ಸಂಗ್ರಹಿಸಿದ್ದು, ಅವರ ಒಲವು ಯಾವ ಪಕ್ಷದ ಪರವಿದೆ ಎಂಬುದನ್ನು ಕಂಡುಕೊಳ್ಳಲಾಗಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಗಳಿಗೆ ನಿರೀಕ್ಷಿತ ಮತ ಹಂಚಿಕೆ

ಸಮೀಕ್ಷೆ ಪ್ರಕಾರ ಕಾಂಗ್ರೆಸ್‍ಗೆ ಅತಿಹೆಚ್ಚಿನ ಮತ ಸಿಕ್ಕಿದ್ದು, ಶೇ.40ರಷ್ಟು ಮತದಾರರು 'ಕೈ' ಪಕ್ಷದ ಪರ ಒಲವು ಹೊಂದಿದ್ದಾರೆಂದು ತಿಳಿದುಬಂದಿದೆ. ಅದೇ ರೀತಿ ಆಡಳಿತಾರೂಢ ಬಿಜೆಪಿ ಪರ ಶೇ.34ರಷ್ಟು ಮತದಾರರು ಒಲವು ಹೊಂದಿದ್ದಾರೆಂದು ತಿಳಿದುಬಂದಿದೆ. ಇನ್ನೂ ಜೆಡಿಎಸ್ ಪರ ಶೇ.17ರಷ್ಟು ಮತದಾರರು ಒಲವು ಹೊಂದಿದ್ದಾರೆ ಮತ್ತು ಶೇ.6ರಷ್ಟು ಜನರು ಇತರರ ಪರವಾಗಿದ್ದರೆ, ಶೇ.3ರಷ್ಟು ಮತದಾರರು ಸೈಲೆಂಟ್ ವೋಟ್ ಫ್ಯಾಕ್ಟರ್(SVF) ಆಗಿದ್ದಾರೆಂದು ತಿಳಿದುಬಂದಿದೆ.