ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೊನೆಗೂ 'ಭೈರತಿ ರಣಗಲ್' ಅವತಾರದಲ್ಲಿ ಶಿವಣ್ಣ ಎಂಟ್ರಿಗೆ ಮುಹೂರ್ತ ಫಿಕ್ಸ್

ಇತ್ತೀಚಿನ ಬೆಳವಣಿಗೆಯ ಪ್ರಕಾರ, ಭೈರತಿ ರಣಗಲ್ಗಾಗಿ ನಿರ್ದೇಶಕ ನರ್ತನ್ ಮತ್ತು ಶಿವರಾಜ್ಕುಮಾರ್ ಕೈಜೋಡಿಸಲಿದ್ದಾರೆ ಮತ್ತು ಈ ವರ್ಷದಲ್ಲೇ ಚಿತ್ರ ಸೆಟ್ಟೇರಲಿದೆ ಎಂಬ ಊಹಾಪೋಹಗಳು ಹರಡಿವೆ. ಮತ್ತೊಂದು ಕುತೂಹಲಕಾರಿ ಅಂಶ ಏನೆಂದರೆ, ಶಿವಣ್ಣ-ನರ್ತನ್ ಸಹಭಾಗಿತ್ವದಲ್ಲಿ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎರಡನೇ ಸಿನಿಮಾ ಇದಾಗಿದೆ. ಇಂದು ಶಿವರಾತ್ರಿಯ ಸಂದರ್ಭದಲ್ಲಿ ನಟ ಮತ್ತು ನಿರ್ದೇಶಕರು ಕೈಜೋಡಿಸುತ್ತಿರುವ ಬಗ್ಗೆ ಅಧಿಕೃತ ಪ್ರಕಟಣೆಯನ್ನು ನೀಡಲಿದ್ದಾರೆ. ಯಶ್ ಅವರ ಸಿನಿಮಾದ ಬದಲು ರಾಮ್ ಚರಣ್ ಜೊತೆ ನರ್ತನ್ ತೆಲುಗು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.
ಆದರೆ, ನಮ್ಮ ಮೂಲಗಳು ಹೇಳುವಂತೆ ನಿರ್ದೇಶಕ ನರ್ತನ್ ಅವರು, ನಿರ್ದೇಶಕ ಶಂಕರ್ ಅವರೊಂದಿಗೆ ಈಗ ಮಾಡುತ್ತಿರುವ ಕೆಲಸವನ್ನು ಪೂರ್ಣಗೊಳಿಸುವುದನ್ನೇ ಕಾಯುತ್ತಿದ್ದಾರೆ. ಅದು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ, ನಿರ್ದೇಶಕರು ಬಹುತೇಕ ಮುಕ್ತಾಯ ಹಂತದಲ್ಲಿರುವ 'ಭೈರತಿ ರಣಗಲ್' ಚಿತ್ರದ ಸ್ಕ್ರಿಪ್ಟ್ ಕೈಗೆತ್ತಿಕೊಂಡಿದ್ದು, ಸದ್ಯದಲ್ಲೇ ಪೂರ್ವ ತಯಾರಿ ಕಾರ್ಯ ಆರಂಭವಾಗಲಿದೆ ಎನ್ನಲಾಗಿದೆ. ಶ್ರೀಮುರಳಿ ನಟನೆಯ ಮಫ್ತಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ 'ಹ್ಯಾಟ್ರಿಕ್ ಹೀರೋ' ಶಿವರಾಜ್ಕುಮಾರ್ ‘ಭೈರತಿ ರಣಗಲ್’ ಅವರ ಅಭಿಮಾನಿಗಳಿಗೆ ಬಹಳ ಮೆಚ್ಚಿನದು.
ಸಿನಿಮಾದಲ್ಲಿ ನಟ ಶ್ರೀಮುರಳಿ ಅವರು ಗಣ ಎಂಬ ಪಾತ್ರ ಮಾಡಿದ್ದರೆ, ಶಿವಣ್ಣ ಭೈರತಿ ರಣಗಲ್ ಆಗಿ ಗಮನಸೆಳೆದಿದ್ದರು. ಶಿವಣ್ಣ ಅವರ ಪಾತ್ರ ಬಹಳ ದೊಡ್ಡ ಸದ್ದು ಮಾಡಿತ್ತು. ಇದೀಗ ‘ಮಫ್ತಿ’ ಚಿತ್ರದ ನಿರ್ದೇಶಕ ನರ್ತನ್, ಅದೇ ಶೀರ್ಷಿಕೆಯಡಿ ಈ ಪಾತ್ರದ ಮೇಲೆ ಪೂರ್ಣ ಪ್ರಮಾಣದ ಚಲನಚಿತ್ರವನ್ನು ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಇಂಡಸ್ಟ್ರಿಯ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರಾಗಿರುವ ಶಿವಣ್ಣ ಅವರ 125ನೇ ಚಿತ್ರ ತೆಲುಗಿನಲ್ಲಿ ಇತ್ತೀಚೆಗೆ ಬಿಡುಗಡೆಯಾಯಿತು.
ಶ್ರೀನಿ ನಿರ್ದೇಶನದ ಘೋಸ್ಟ್ ಮತ್ತು ಯೋಗರಾಜ್ ಭಟ್ ಅವರ ‘ಕರಟಕ ದಮನಕ’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ಇದೇ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ತೊಡುತ್ತಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ 45 ಚಿತ್ರದಲ್ಲೂ ಶಿವಣ್ಣ ನಟಿಸಲಿದ್ದಾರೆ. ಸದ್ಯ ರಜನಿಕಾಂತ್ ಜೊತೆ ಜೈಲರ್ ಮತ್ತು ಧನುಷ್ ಜೊತೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲಿರುವ ಶಿವಣ್ಣ, ಸಚಿನ್ ರವಿ ಜೊತೆ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ನರ್ತನ್ ನಿರ್ದೇಶನದ ಈ ಸಿನಿಮಾಗೆ ಪ್ರೊಡಕ್ಷನ್ ಹೌಸ್, ತಾರಾಗಣ ಮತ್ತು ಸಿಬ್ಬಂದಿಯ ಅಧಿಕೃತ ವಿವರಗಳಿಗಾಗಿ ಕಾಯಲಾಗುತ್ತಿದೆ.