ಭಾರತದಲ್ಲಿ ಕೊರೋನಾ ಸುನಾಮಿ, ಒಂದೇ ದಿನ 3,17,532 ಕೇಸ್, 491 ಸಾವು..!

ನವದೆಹಲಿ,ಜ.20- ಭಾರತದಲ್ಲಿ ಹೊಸದಾಗಿ 3,17,532 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ 3,82,18,773ಕ್ಕೇರಿದೆ. ಇದರಲ್ಲಿ 9,287 ಓಮಿಕ್ರಾನ್ ರೂಪಾಂತರಿ ಸೋಂಕು ಪ್ರಕರಣಗಳೂ ಸೇರಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ.
ದೈನಿಕ ಪ್ರಕರಣಗಳ ಸಂಖ್ಯೆ ಕಳೆದ 249 ದಿನಗಳಲ್ಲೇ ಅತ್ಯಕವಾಗಿದೆ. ಸಕ್ತಿಯ ಪ್ರಕರಣಗಳ ಸಂಖ್ಯೆ 19,24,051ಕ್ಕೆ ಹೆಚ್ಚಳವಾಗಿದೆ. ಇದು 234 ದಿನಗಳಲ್ಲೇ ಅತ್ಯಕ ಪ್ರಮಾಣವಾಗಿದೆ. ಕಳೆದ 24 ಗಂಟೆಗಳ ಅವಯಲ್ಲಿ 491 ಮಂದಿ ಮರಣಿಸುವುದರೊಂದಿಗೆ ಒಟ್ಟಾರೆ ಕೋವಿಡ್ ಮರಣ ಪ್ರಮಾಣ 4,87,693ಕ್ಕೆ ಹೆಚ್ಚಿದೆ.
ಬುಧವಾರದಿಂದ ಓಮಿಕ್ರಾನ್ ಪ್ರಕರಣಗಳಲ್ಲಿ ಶೇ.3.63ರಷ್ಟು ಏರಿಕೆ ಕಂಡು ಬಂದಿದೆ ಎಂದು ಸಚಿವಾಲಯ ಹೇಳಿದೆ. ಒಟ್ಟಾರೆ ಸೋಂಕುಗಳಲ್ಲಿ ಶೇ.5.03ರಷ್ಟು ಸಕ್ರಿಯ ಪ್ರಕರಣಗಳಾಗಿವೆ. ರಾಷ್ಟ್ರೀಯ ಕೋವಿಡ್-19 ಚೇತರಿಕೆ ಪ್ರಮಾಣ ಶೇ.93.09ಕ್ಕೆ ಇಳಿದಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳಲ್ಲಿ 93,051 ರಷ್ಟು ಹೆಚ್ಚಳ ಕಂಡು ಬಂದಿದೆ. ಕಳೆದ ವರ್ಷ ಮೇ 15ರಂದು ದೇಶದಲ್ಲಿ ಒಂದೇ ದಿನ 3,11,170 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು.