ತೆಂಗಿನ ಮರ ಹತ್ತಿ ಅಲ್ಲೇ ಪ್ರಜ್ಞೆ ತಪ್ಪಿದ ಭೂಪ!
ಬೆಂಗಳೂರು: ಈತ ತೆಂಗಿನ ಮರ ಹತ್ತಿ ಅಲ್ಲೇ ಪ್ರಜ್ಞೆ ತಪ್ಪಿ ಸಿಲುಕಿಬಿಟ್ಟಿದ್ದಾನೆ. ಕಡೆಗೆ ಅದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕದಳದವರು ತೆಂಗಿನ ಮರದಲ್ಲಿ ಪ್ರಜ್ಞೆ ತಪ್ಪಿ ಸಿಲುಕಿದ್ದವನ ರಕ್ಷಣೆ ಮಾಡಿದ್ದಾರೆ.
ಮರ ಹತ್ತಿದ್ದ ಬಳಿಕ ಪ್ರಜ್ಞೆ ತಪ್ಪಿ ಮರದಲ್ಲಿ ಸಿಲುಕಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಾಣಿಸುತ್ತಿದ್ದಾನೆ. ಸ್ಥಳಕ್ಕಾಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಮೂವತ್ತು ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.
ಈ ಘಟನೆ ಮೈಲಸಂದ್ರ ಬಳಿ ಇರುವ ವಿಜಯಶ್ರೀ ಲೇಔಟ್ನಲ್ಲಿ ನಡೆದಿದೆ. ಸದ್ಯ ಪ್ರಜ್ಞೆ ಕಳೆದುಕೊಂಡಿರುವ ವ್ಯಕ್ತಿಯನ್ನು ರಕ್ಷಣಾ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ.