ಮುಂದಿನ ತಿಂಗಳು ಟೆನಿಸ್ ಸಾನಿಯಾ ಮಿರ್ಜಾ ನಿವೃತ್ತಿ
ನವದೆಹಲಿ: ದುಬೈ ಡ್ಯೂಟಿ ಫ್ರೀ ಟೆನಿಸ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ನಂತರ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ವೃತ್ತಿಪರ ಟೆನಿಸ್ ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿದೆ. ಅಂದ ಹಾಗೇ ದುಬೈ ಡ್ಯೂಟಿ ಚಾಂಪಿಯನ್ ಶಿಪ್ ಟೂರ್ನಮೆಂಟ್ ಮುಂದಿನ ತಿಂಗಳು ನಡೆಯಲಿದೆ.
ಸಾನಿಯಾ ಮಿರ್ಜಾ ಕಳೆದ 10 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ. ಸಾನಿಯಾ ಮಿರ್ಜಾ ದುಬೈನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಮೂಲಕ ಸಾನಿಯಾ ಮಿರ್ಜಾ ತಮ್ಮ ಅಭಿಮಾನಿಗಳಲ್ಲಿ ಟೆನಿಸ್ ವೃತ್ತಿಜೀವನಕ್ಕೆ ವಿದಾಯ ಹೇಳಲಿದ್ದಾರೆ.