ಸಿಲಿಕಾನ್‌ ಸಿಟಿ ಜನರೇ ಹುಷಾರ್‌..! ATM ಕ್ಯಾಶ್​ ತೆಗೆದುಕೊಡುವ ನೆಪದಲ್ಲಿ ʼವೃದ್ಧರಿಗೆ ಪಂಗನಾಮʼ

ಸಿಲಿಕಾನ್‌ ಸಿಟಿ ಜನರೇ ಹುಷಾರ್‌..! ATM ಕ್ಯಾಶ್​ ತೆಗೆದುಕೊಡುವ ನೆಪದಲ್ಲಿ ʼವೃದ್ಧರಿಗೆ ಪಂಗನಾಮʼ

ಬೆಂಗಳೂರು : ಸಿಲಿಕಾನ್‌ ಸಿಟಿ ಎಟಿಎಂ ಹೋಗುವ ಮುನ್ನ ಜನರೇ ಹುಷಾರ್‌, ಇದೀಗ ನಗರಗಳಿಗೆ ಖತರ್ನಾಕ್‌ ಕಳ್ಳರು ಎಂಟ್ರಿ ಕೊಟ್ಟಿದ್ದು, ಈತ ATM ಕ್ಯಾಶ್​ ತೆಗೆದುಕೊಡುವ ನೆಪದಲ್ಲಿ ವೃದ್ಧರಿಗೆ ವಂಚನೆ ಮಾಡು ಐನಾತಿ ವಂಚಕ ಹಾವಳಿ ಸದ್ದಿಲ್ಲದೇ ಹೆಚ್ಚಾಗಿದೆ.

ಅದೇಷ್ಟೋ ಎಟಿಎಂ ಗಳಲ್ಲಿ ಕೆಲವೊಮ್ಮ ಹಣಗಳೇ ಬರೊದಿಲ್ಲ ಆ ಸಂದರ್ಭದಲ್ಲಿ ಪಕ್ಕದಲ್ಲಿ ಯಾರದ್ರೂ ಇದ್ದವರಲ್ಲಿ ತೆಗೆದುಕೊಡೊದಕ್ಕೆ ಕೇಳುವುದು ಸಹಜ.. ಇದೀಗ ಇಂತಹ ಸಮಸ್ಯೆಯನ್ನು ಬಲಿಯಾಗುವ ವಯೋವೃದ್ಧರನ್ನೆ ಟಾರ್ಗೆಟ್‌ ಮಾಡಿಕೊಂಡು ಕಳ್ಳತನ ಮಾಡುತ್ತಿರೋ ವ್ಯಕ್ತಿಯೊಬ್ಬ ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದು , ಈತನ ದುಷ್ಕೃತ್ಯ ಕೇಳಿದ್ರೆ ಬಿಚ್ಚಿಬೀಳುವುದು ಗ್ಯಾರಂಟಿ..

ಶಶಿಕುಮಾರ್ ಎಂಬ ಯುವಕನೊಬ್ಬ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ. ಹಣ ಮಾಡುವ ಉದ್ದೇಶದಿಂದ ಎಟಿಎಂನಲ್ಲಿ ದೋಖಾ ಮಾಡೋದಕ್ಕೆ ಮುಂದಾಗಿದ್ದಾನೆ.

ಈತನ ಕೈಚಳಕ ಸಿಸಿಟಿವಿಯಲ್ಲಿ ದೃಶ್ಯವಾಳಿಗಳು ಸೆರೆಯಾಗಿದ್ದು, ಎಟಿಎಂ ಬರುವ ವೃದ್ಧರ ಕಾರ್ಡ್ ಪಡೆದುಕೊಂಡು ಕ್ಯಾಶ್​ ತೆಗೆದುಕೊಡುವ ನೆಪದಲ್ಲಿ, ಸೀಕ್ರೆಟ್​ ಪಿನ್ ಕೇಳಿಕೊಂಡು, ಕಾರ್ಡ್ ಎಕ್ಸ್​ಚೇಂಜ್​ ಮಾಡಿದ ಬಳಿಕ ನೇರವಾಗಿ ಜ್ಯುವೆಲ್ಲರಿ ಶಾಪ್​ಗೆ ಹೋಗಿ ಬಗೆಬಗೆಯ ಚಿನ್ನಾಭರಣ ಖರೀದಿಸುತ್ತಾನೆ. ಅಂಗಡಿಯಲ್ಲಿ ಕಾರ್ಡ್​ನಲ್ಲೇ ಪೇಮೆಂಟ್​ ಮಾಡಿ ವಂಚನೆ ಮಾಡುತ್ತಾನೆ. ಈ ಘಟನೆ ಶಾಪ್​ನ ಸಿಸಿಟಿವಿಯಲ್ಲೂ ಕೃತ್ಯ ಸೆರೆಯಾಗಿತ್ತು.

ಈತ 16 ಲಕ್ಷ ರೂಪಾಯಿಯಷ್ಟ ಹಣವನ್ನು ಎಟಿಎಂ ಕಾರ್ಡ್ ವಂಚಿಸಿದ್ದಾನೆ ಎಂದು ಮಾಹಿತಿ ಬಹಿರಂಗವಾಗಿ ಆ ನಿಟ್ಟಿನಲ್ಲಿ ಎಚ್ಚರ ವಹಿಸೋದು ಅತ್ಯಗತ್ಯವಾಗಿ ಸ್ವಲ್ಪ ಯಾಮಾರಿದ್ರೂ ಹಣವನ್ನು ದೋಚುವವರು ಕಮ್ಮಿಯೇನಿಲ್ಲ ಎಂದು ತಿಳಿಯಬಹುದಾಗಿದೆ.