ಹುಬ್ಬಳ್ಳಿಯಲ್ಲಿ ರೋಡ್ ಶೋ ವೇಳೆ ಪ್ರಧಾನಿ ಮೋದಿಗೆ ಹಾರಹಾಕಲು ಹೋಗಿದ್ದ ಬಾಲಕ ಹೇಳಿದ್ದೇನು?

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರು ಮನ್ಯುಷರು ಅಲ್ಲ, ದೇವರು ಹೀಗಾಗಿ ಅವರಿಗೆ ನಾನು ಹಾರ ಹೋಗಲು ಹೋಗಿದ್ದೆ ಎಂದು ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ ವೇಳೆ ಹಾರ ಹಾಕಲು ಯತ್ನಿಸಿದ ಬಾಲಕ ಹೇಳಿದ್ದಾನೆ.
ರಾಷ್ಟ್ರೀಯ ಯುವಜನೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಹುಬ್ಬಳ್ಳಿಗೆ ಆಗಮಿಸಿದ್ದರು. ರೋಡ್ ಶೋ ನಡೆಸುವ ವೇಳೆ ಮೋದಿಗೆ ಹಾರಹಾಕಲು ಹೋಗಿದ್ದ 6 ನೇ ತರಗತಿ ಬಾಲಕ ಕುನಾಲ್ ಈ ಬಗ್ಗೆ ಮಾತನಾಡಿದ್ದು, ನಾನು 2 ವರ್ಷದ ಹಿಂದೆ ಮೋದಿಯವರು ಧಾರವಾಡಕ್ಕೆ ಬಂದಾಗ ನೋಡಿದ್ದೆ. ಈಗ ಮತ್ತೆ ಮೋದಿ ಬರುವ ವಿಚಾರ ತಿಳಿದು ನೋಡಲು ಹೋಗಿದ್ದೆ. ಅವರನ್ನ ಭೇಟಿ ಆಗಬೇಕು, ಹತ್ತಿರದಿಂದ ನೋಡಬೇಕೆಂದು ಆಸೆ ಇತ್ತು ಎಂದು ಹೇಳಿದ್ದಾನೆ.
ಹುಬ್ಬಳ್ಳಿಯ ರೋಡ್ ಶೋ ವೇಳೆ ಪ್ರಧಾನಿ ಮೋದಿಗೆ ಹೂವಿನ ಹಾಕಲು ಬಾಲಕ ಯತ್ನಿಸಿದ್ದು, ಭದ್ರತೆಯನ್ನು ಮೀರಿ ಬಾಲಕನೊಬ್ಬ ರಸ್ತೆ ಪಕ್ಕದ ಬ್ಯಾರಿಕೇಟ್ ದಾಟಿ ಪ್ರಧಾನಿ ಮೋದಿಗೆ ಹಾರ ಹಾಕಲು ಯತ್ನಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದರು.