ಬಸ್ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರ ಸಾವು: ಡ್ರೈವರ್, ಕಂಡಕ್ಟರ್ ಗೆ ಮೃತನ ಸ್ನೇಹಿತರಿಂದ ಥಳಿತ.

ಬಸ್ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರ ಸಾವು: ಡ್ರೈವರ್, ಕಂಡಕ್ಟರ್ ಗೆ ಮೃತನ ಸ್ನೇಹಿತರಿಂದ ಥಳಿತ.

ಬೆಂಗಳೂರಿಗೆ ; ಬರುತ್ತಿದ್ದ ಎರಡು ಪ್ರತ್ಯೇಕ ಕೆ.ಎಸ್ ಆರ್ ಟಿಸಿ ಬಸ್ಗಳು ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ತಲುಪೋಕೆ ಕೆಲವೇ ನಿಮಿಷಗಳು ಬಾಕಿ ಇತ್ತು . ಸಾಕಷ್ಟು ದೂರದಿಂದ ಸೇಫ್ ಆಗಿ ಬಂದಿದ್ದ ಬಸ್ಗಳು, ಒಂದು ರಾಜ್ ಕುಮಾರ್ ರಸ್ತೆಯಲ್ಲಿ ಅಪಘಾತ ಮಾಡಿದ್ರೆ ಇನ್ನೊಂದು ಮೈಸೂರು ಬ್ಯಾಕ್ ಸರ್ಕಲ್ನಲ್ಲಿ ಬೈಕ್ ಸವಾರನನ್ನು ಬಲಿ ಪಡೆದಿದೆ..

ರಾಜ್ಕುಮಾರ್ ರಸ್ತೆಯಲ್ಲಿ ಕೆ.ಎಸ್ ಆರ್ ಟಿ ಸಿ ಬಸ್ ಗೆ ಬೈಕ್ ಡಿಕ್ಕಿಯಾಗಿ ಅಪಘಾತವಾಗಿದ್ದು ಘಟನೆಯಲ್ಲಿ 39 ವರ್ಷದ ರಮೇಶ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಮಧ್ಯರಾತ್ರಿ 1.30 ರ ಸುಮಾರಿಗೆ ಕುಕ್ಕೇ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಬಂದಿದ್ದ ಕೆ.ಎಸ್ ಆರ್ ಟಿಸಿ ಬಸ್ ರಾಜ್ ಕುಮಾರ್ ರಸ್ತೆ ಮೂಲಕ ಮೆಜೆಸ್ಟಿಕ್ ಗೆ ಹೋಗ್ತಿತ್ತು ಈ ವೇಳೆ ಬೈಕ್ ನಲ್ಲಿ ಹೋಗ್ತಿದ್ದ ಮೃತ ರಮೇಶ್ ಬಸ್ ಓವರ್ ಟೇಕ್ ಮಾಡಿ ಬಲತಿರುವು ಪಡೆದುಕೊಳ್ಳಲು ಹೋಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ.. ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ..

ಕುಡಿದು ಬೈಕ್ ಅಪಘಾತ ಮಾಡಿಕೊಂಡಿದ್ದು ಘಟನೆ ನಂತರ ಮೃತನ ಸ್ನೇಹಿತರು ನಮಗೆ ಮನಬಂದಂತೆ ಥಳಿಸಿದ್ದಾರೆ ಅಂತಾ ಕೆ.ಎಸ್ ಆರ್ ಟಿಸಿ ಬಸ್ ನ ಚಾಲಕ ಮತ್ತು ನಿರ್ವಾಹಕ ಮೃತನ ಸ್ನೇಹಿತರ ವಿರುದ್ದ ಆರೋಪಿಸಿದ್ದಾರೆ.. ಸುಮಾರು 15-20 ಜನ ಹಲ್ಲೆ ಮಾಡಿದ್ದಾರೆ ಅಂತಾ ಬಸ್ ಸಿಬ್ಬಂದಿ ಆರೋಪಿಸಿದ್ದಾರೆ.. ಅಪಘಾತವಾಗಿದ್ದ ಬೈಕ್ ಬಳಿ ಮದ್ಯದ ಬಾಟಲಿಗಳು ಕೂಡ ಪತ್ತೆಯಾಗಿದ್ದು ಬೈಕ್ ಸವಾರ ಕುಡಿದು ಗಾಡಿ ಓಡಿಸಿದ್ದ ಶಂಕೆ ವ್ಯಕ್ತವಾಗಿದೆ.. ಇನ್ನು ಈ ಬಗ್ಗೆ ಮೃತ ರಮೇಶ್ ಸ್ನೇಹಿತ ಬಸ್ ಚಾಲಕರ ವಿರುದ್ದ ಪ್ರತ್ಯಾರೋಪ ಮಾಡಿದ್ದಾರೆ.. ನಿರ್ಲಕ್ಷ್ಯ ಚಾಲನೆ ಮಾಡಿ ಕೆ.ಎಸ್ ಆರ್ ಟಿಸಿ ಚಾಲಕ ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಅದಕ್ಕೆ ನನ್ನ ಸ್ನೇಹಿತ ಬಲಿಯಾಗಿದ್ದಾನೆ ಎಂಸು ಆರೋಪಿಸಿದ್ದಾರೆ.

ಇನ್ನು ತಿರುಪತಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಮೈಸೂಸೂರ್ ಬ್ಯಾಂಕ್ ಸರ್ಕಲ್ ಬಳಿ ಬೈಕ್ ಸವಾರರನಿಗೆ ಡಿಕ್ಕಿಹೊಡೆದಿದೆ. ಅಲ್ಲೇ ಇದ್ದ ಪೊಲೋಸರು ಬೈಕ್ ಸವಾರರನ್ನಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಸೇರಿಸಿದ್ರು ಬೈಕ್ ಸವಾರ ಬದುಕಲಿಲ್ಲ.ಬಿಬಿಎಂಪಿ ಹೇಲ್ತ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರ್ ಮೃತ ದುರ್ದೈವಿ. ಕಾಕ್ಸ್ ಟೌನ್ ನಿವಾಸಿಯಾ ಶ್ರೀಧರ್ ತನ್ನ ಮಗನ ಕಾಲೇಜ್ ಫೀಸ್ ಕಟ್ಟಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಇನ್ನು ರಾಜಕುಮಾರ್ ರಸ್ತೆಯಲ್ಲಿ ನೆಡೆದ ಅಪಘಾತ ಸಂಬಂಧ ರಾಜಾಜಿನಗರ ಸಂಚಾರಿ ಮತ್ತು ಎಲ್ ಆಯಂಡ್ ಓ ಎರಡೂ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.. ಅಪಘಾತ ಸಂಬಂಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ರೆ, ಬಸ್ ಡ್ರೈವರ್ ಗಳ ಮೇಲೆ ಹಲ್ಲೆ ಮಾಡಿದ ಸಂಬಂಧ ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಇನ್ನು ಮೈಸೂರು ಬ್ಯಾಂಕ್ ಅಪಘಾತ ಸಂಬಂಧ ಹಲಸೂರುಗೇಟ್ ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನೆಡೆಸುತ್ತಿದ್ದಾರೆ.