ಪ್ರೇಮಿಗಳ ದಿನದಂದು 'ಹಸು ಅಪ್ಪುಗೆ ದಿನ' ಆಚರಿಸಿ : 'ಕೇಂದ್ರ ಸರ್ಕಾರ' ಆದೇಶ

ನವದೆಹಲಿ : ಪ್ರೇಮಿಗಳ ದಿನವನ್ನು ಹಸು ಅಪ್ಪುಗೆಯ ದಿನವನ್ನಾಗಿ ಆಚರಿಸಲು ಭಾರತ ಸರ್ಕಾರ ಮನವಿ ಮಾಡಿದೆ. ಅಂದ್ಹಾಗೆ, ರಾಷ್ಟ್ರೀಯ ಕಾಮಧೇನು ಆಯೋಗದ ಮಾಜಿ ಅಧ್ಯಕ್ಷ ಡಾ. ವಲ್ಲಭ್ ಕಥಿರಿಯಾ ಮತ್ತು ಅವರ ಗೆಳೆಯರ ಗುಂಪು, 'ಯುವಕರು ಆರ್ಯ ಸಂಸ್ಕೃತಿಯನ್ನ ಮರೆತು ಪಾಶ್ಚಿಮಾತ್ಯ ಸಂಸ್ಕೃತಿಯನ್ನ ಕುರುಡಾಗಿ ಅನುಕರಣೆ ಮಾಡುತ್ತಿದ್ದಾರೆ.
ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು 14 ಪ್ರೇಮಿಗಳ ದಿನದಂದು ಹಸು ಅಪ್ಪುಗೆಯ ದಿನವನ್ನ ಆಚರಿಸಲು ಅಧಿಸೂಚನೆಯನ್ನ ಹೊರಡಿಸಿದೆ. ಅದಕ್ಕಾಗಿಯೇ ಪ್ರೇಮಿಗಳ ದಿನವಲ್ಲದೇ ದೇಶಾದ್ಯಂತ 'ಕೌ ಹಗ್ ಡೇ' ಎಂದು ವಿಶೇಷ ಆಚರಣೆ ನಡೆಯಲಿದೆ.
ಯೂರೋಪ್ ಮತ್ತು ಅಮೆರಿಕದಲ್ಲಿ ಹಸುವಿನಿಂದ ಧನಾತ್ಮಕ ಶಕ್ತಿಯನ್ನ ಪಡೆಯಲು ಹಸುವನ್ನು ಅಪ್ಪಿಕೊಳ್ಳಲು 5200 ರೂಪಾಯಿ ಪಡೆಯುತ್ತಿದ್ದಾರೆ. ಹಸುವಿನ ಸಂಸ್ಕೃತಿ ಮತ್ತು ಹಸುಗಳ ಔಷಧೀಯ ಪ್ರಯೋಜನಗಳ ಕಡೆಗೆ ಭಾರತದ ಭವಿಷ್ಯದ ಪೀಳಿಗೆಯನ್ನ ಉತ್ತೇಜಿಸುವ ಉದ್ದೇಶದಿಂದ ಹಸು ಅಪ್ಪಿಕೊಳ್ಳುವ ದಿನದ ವಿಶಿಷ್ಟ ಪರಿಕಲ್ಪನೆಯೊಂದಿಗೆ ಪ್ರೇಮಿಗಳ ದಿನವನ್ನ ಆಚರಿಸಲಾಗುತ್ತದೆ.
ವಿಶೇಷವಾಗಿ ಹಸು ಪ್ರೇಮಿಗಳನ್ನ ಆಕರ್ಷಿಸುವ ವಿಷಯವೆಂದರೆ ಫೆಬ್ರವರಿ 14 ರಂದು ಎಲ್ಲಾ ಗೋಶಾಲೆಗಳು ಸೇರಿದಂತೆ ಎಲ್ಲಾ ಸ್ಥಳಗಳಲ್ಲಿ ಜನರು ಹಸುವನ್ನ ಅಪ್ಪಿಕೊಳ್ಳಬಹುದು. ಗೋಶಾಲೆಗೆ ಬಂದಾಗ ಜನರು ಗೋವುಗಳನ್ನು ತಬ್ಬಿಕೊಳ್ಳುತ್ತಾರೆ ಮತ್ತು ಕೆಲವು ಯುವಕರು ಗೋವುಗಳೊಂದಿಗೆ ಸೆಲ್ಫಿ ಕೂಡ ತೆಗೆದುಕೊಳ್ಳುತ್ತಾರೆ.