ಎಐಎಂಐಎಂಗೆ ಪ್ರಮುಖರ ಗುಡ್ ಬೈ-ಹರಿದ ಗಾಳಿಪಟ; ದರಗಾದ ಸೇರಿ ಹಲವರು ಕಾಂಗ್ರೆಸ್‌ಗೆ

ಎಐಎಂಐಎಂಗೆ ಪ್ರಮುಖರ ಗುಡ್ ಬೈ-ಹರಿದ ಗಾಳಿಪಟ; ದರಗಾದ ಸೇರಿ ಹಲವರು ಕಾಂಗ್ರೆಸ್‌ಗೆ
ಎಐಎಂಐಎಂನ ಧಾರವಾಡ ಜಿಲ್ಲಾಧ್ಯಕ್ಷ ರಾಜೇಸಾಬ್ ಮೌಲಾಸಾಬ್ ದರಗದ, ಪರ್ವೇಜ್‌ಅಹ್ಮದ್ ಅತ್ತಾರ್, ಫಜಲುಲ್ಲಾ ಉಸ್ತಾದ್, ಸುಲೇಮಾನ್ ಸಿದ್ದಕಿ, ನಜೀರ್‌ಅಹ್ಮದ್ ನವಲೂರ, ಮೊಹ್ಮದ್‌ಸಾದಿಕ್ ಬಾರೂದವಾಲೆ ಸಹಿತ ನೂರೈವತ್ತಕ್ಕೂ ಅಧಿಕ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆಯಾದ ವರಾಗಿದ್ದಾರೆ. ಬಳಿಕ ಮಾತನಾಡಿದ ಅವರು, ಎಐಎಂಐಎಂನ ತಟಸ್ಥ ನಡೆ ಹಾಗೂ ಪಕ್ಷದ ಸಿದ್ಧಾಂತ, ಧೋರಣೆಗಳಿಗೆ ಬೇಸರಗೊಂಡು ತಾವು ಕಾಂಗ್ರೆಸ್ ಸೇರಿರುವುದಾಗಿ ಹೇಳಿದರು.
ಯಾವುದೇ ಫಲಾಪೇಕ್ಷೆ ಇಲ್ಲದೆ ಸಾಮಾಜಿಕ ನ್ಯಾಯವನ್ನು ಒದಗಿಸುವ, ಸಮಾಜದಲ್ಲಿ ಒಳ್ಳೆಯ ಭವಿಷ್ಯ ರೂಪಿಸುವ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಸೇರಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ, ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಕೈ ಸದಸ್ಯತ್ವ ಪಡೆದರು.
ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಹಳ್ಳೂರ ಸೇರಿದಂತೆ ಅನೇಕರಿದ್ದರು.