2021ರಲ್ಲಿ ನಿತ್ಯ ಸರಾಸರಿ 450 ಮಂದಿ ಆತ್ಮಹತ್ಯೆ: ಕೇಂದ್ರ ಸರ್ಕಾರ

ನವದೆಹಲಿ: 2021ರಲ್ಲಿ ದೇಶದಲ್ಲಿ ನಿತ್ಯ ಸರಾಸರಿ 450 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರವನ್ನು NCRB ದತ್ತಾಂಶಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರವು ಲೋಕಸಭೆಗೆ ತಿಳಿಸಿದೆ. '2021ರಲ್ಲಿ 1,64,033 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 42,004 ದಿನಗೂಲಿ ನೌಕರರು, 23,179 ಗೃಹಣಿಯರು, 20,231 ಸ್ವ ಉದ್ಯೋಗಿಗಳು, 15,870 ವೇತನದಾರರು, 13,089 ವಿದ್ಯಾರ್ಥಿಗಳು, 12,055 ಉದ್ಯಮ ವಲಯದ ಮಂದಿ, 11,431 ಮಂದಿ ಖಾಸಗಿ ವಲಯದ ಕೆಲಸಗಾರರು' ಆತ್ಮಹತ್ಯೆ ಮಾಡಿಕೊಂಡಿದ್ದಾರೆ.